ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಹೆಚ್ಚುವರಿ ಡಿ ಸಿ ಎಮ್ ಹುದ್ದೆ ಸೃಷ್ಟಿ ಮಾಡಿ ಎಂಬ ಹೇಳಿಕೆ, ಕಾಂಗ್ರೇಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿವ ರಾಜಣ್ಣ ಮೂರು ಡಿ ಸಿ ಎಮ್ ಮಾಡಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಕಾಂಗ್ರೇಸ್ಸಿನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ರಾಜಣ್ಣ ಹೇಳಿಕೆಗೆ ದ್ವನಿ ಕೂಡಿಸಿದ್ದಾರೆ. ಮೂರು ಡಿ ಸಿ ಎಮ್ ಬೇಡ, 6 ಡಿ ಸಿ ಎಮ್ ಮಾಡಿ ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ. ಕಾಂಗ್ರೇಸ್ ಅಧಿಕಾರಕ್ಕೆ ಬರಲು ಎಲ್ಲ ಸಮುದಾಯಗಳು ಬೆಂಬಲಿಸಿವೆ. ಅದರಲ್ಲಿ ಒಂದು ಡಿ ಸಿ ಎಮ್ ಹುದ್ದೆಯನ್ನು ಮಹಿಳೆಗೆ ಕೊಡಿ ಎಂದು ಹೇಳಿಕೆ ನೀಡಿದ್ದಾರೆ. ಪರಿಶೀಷ್ಟ ಜಾತಿ, ಜನಾಂಗಕ್ಕೆ ಒಂದು, ಮುಸ್ಲಿಂ ಸಮುದಾಯಕ್ಕೆ ಒಂದು ಡಿ ಸಿ ಎಮ್ ಹುದ್ದೆ ನೀಡಬೇಕೆಂದು ಆಗ್ರಹಿಸಿದ್ದಾರೆ.
