ಗಣೇಶ ಪ್ರತಿಷ್ಟಾಪನೆ ಸಂದರ್ಭದಲ್ಲಿ ಸೌಂಡ ಹಚ್ಚಿದ್ದಾರೆ ಎಂಬ ಕಾರಣಕ್ಕೆ ಸತ್ತೂರಿನ ಪ್ರದೀಪ ಎಂಬ ಯುವಕನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಗರಂ ಆಗಿದ್ದಾರೆ. ರಾಜ್ಯ ಸರ್ಕಾರದ ಕುಮ್ಮಕ್ಕಿನ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ, ಪೊಲೀಸರನ್ನು ಬಳಸಿಕೊಂಡು ನಿರಂತರ ದೌರ್ಜನ್ಯ ನಡೆಯುತ್ತಿದೆ. ವಿಧ್ಯಾಗಿರಿ ಠಾಣೆಯ ಇನ್ಸಪೆಕ್ಟರ ಸಂಗಮೇಶ ಎಂಬುವವರು ಪ್ರದೀಪನ ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ವಿಧ್ಯಾಗಿರಿ ಠಾಣೆಯ ಸಂಗಮೇಶರನ್ನು ಅಮಾನತ್ತು ಮಾಡಬೇಕೆಂದು ಜೋಶಿ ಆಗ್ರಹಿಸಿದ್ದಾರೆ. ಈ ಕುರಿತು ಪೋಲಿಸ್ ಆಯುಕ್ತರಿಗೆ ದೂರು ನೀಡುವದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋತಿರಬಹುದು, ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿ ಸಶಕ್ತವಾಗಿದೆ ಇದನ್ನು ಪೊಲೀಸ ಇಲಾಖೆ ಗಮನಿಸಬೇಕೆಂದು ಎಚ್ಚರಿಸಿದರು. ಗಣಪತಿ ಮೆರವಣಿಗೆ ವೇಳೆ ಯುವಕನೊಬ್ಬ ಅಶ್ಲೀಲ ಹಾಡು ಹಚ್ಚಿದ್ದರಿಂದ ಅಕ್ಕಪಕ್ಕದ ಜನ ಠಾಣೆಗೆ ಕರೆ ಮಾಡಿ ದೂರು ಕೂಟ್ಟಿದ್ದರು. ಪೊಲೀಸರು ಆ ಯುವಕನನ್ನು ಕರೆದು ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ
ನಡೆದ ಸಣ್ಣ ಘಟನೆಗೆ ರಾಜಕೀಯ ಬಣ್ಣ ಕೊಡುತ್ತಿರುವ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನಿಲುವಿಗೆ ಕಾಂಗ್ರೇಸ್ ಮುಖಂಡರು ಕೆಂಡ ಕಾರಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಹೇಳುವದನ್ನು ಬಿಟ್ಟು ಈ ರೀತಿ ಪೋಲಿಸ್ ಅಧಿಕಾರಿಗಳನ್ನು ಹೆದರಿಸುವದನ್ನು ಜೋಶಿಯವರು ಬಿಡಬೇಕೆಂದು ಹೇಳಿದ್ದಾರೆ.
