ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಲಾಭಿ ಆರಂಭವಾಗಿದೆ. ಧಾರವಾಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿಗೆ ಟಿಕೇಟ ನೀಡಬೇಕೆಂದು ಅಸೂಟಿ ಬೆಂಬಲಿಗರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟವೊಂದನ್ನು ಹರಿಬಿಟ್ಟಿರುವ ಅಭಿಮಾನಿಗಳು, ಅಸೂಟಿಯವರಿಗೆ ಟಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ.
ನವಲಗುಂದ ವಿಧಾನಸಭೆ ಚುನಾವಣೆಗೆ ಕಾಂಗ್ರೇಸ್ ಟಿಕೇಟ್ ಪ್ರಭಲ ಆಕಾಂಕ್ಷಿಯಾಗಿದ್ದ ವಿನೋದ ಅಸೂಟಿಗೆ ಕಡೆ ಕ್ಷಣದಲ್ಲಿ ಟಿಕೇಟ್ ತಪ್ಪಿತ್ತು. ಕಾಂಗ್ರೇಸ್ ಸರ್ಕಾರ ಬಂದ ಮೇಲೆ ಉನ್ನತ ಮಟ್ಟದ ಹುದ್ದೆ ನೀಡುವದಾಗಿ ಖುದ್ದು ಸುರ್ಜೆವಾಲಾ ಹೇಳಿದ್ದರು. ಕಡೆ ಕ್ಷಣದಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೇಸ್ ಸೇರಿದ್ದ ಎನ್ ಎಚ್ ಕೋನರೆಡ್ಡಿಯವರಿಗೆ ಟಿಕೇಟ್ ನೀಡಲಾಗಿತ್ತು.
