ಹಿಂದೂ ಧರ್ಮೀಯರ ಪುಣ್ಯಭೂಮಿ, ವಿಶ್ವನಾಥನ ಆದಿನೆಲ, ವಾರಣಾಸಿ ‘ಕಾಶಿ’ಯಲ್ಲಿ ಪರಶಿವನ ಸ್ವರೂಪಗಳಾದ ಡಮರುಗ, ಬಿಲ್ವಪತ್ರೆ ಹಾಗೂ ತ್ರಿಶೂಲಗಳನ್ನು ಹೋಲುವ ಆಕೃತಿಗಳೊಂದಿಗೆ ನಿರ್ಮಾಣವಾಗಲಿರುವ ನೂತನ ಅಂತಾರಾಷ್ಟ್ರೀಯ ‘ಕ್ರಿಕೆಟ್’ ಕ್ರೀಡಾಂಗಣಕ್ಕೆ ಪ್ರಧಾನಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶಂಕುಸ್ಥಾಪನೆಗೆ ಭಾರತ ರತ್ನ ಸಚಿನ ತೆಂಡೋಲ್ಕರ, ರವಿ ಶಾಸ್ತ್ರಿ, ಸುನೀಲ್ ಗವಾಸ್ಕರ ಸಹ ಆಗಮಿಸಿದ್ದು, ಈ ಕ್ರೀಡಾಂಗಣ ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ. 30 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು, ಇದಕ್ಕಾಗಿ 450 ಕೋಟಿ ವೆಚ್ಚವಾಗಲಿದೆ. ಉತ್ತರ ಪ್ರದೇಶ ಸರ್ಕಾರ 120 ಕೋಟಿ ಮತ್ತು ಬಿ ಸಿ ಸಿ ಐ 330 ಕೋಟಿ ಹಣ ವೆಚ್ಚ ಮಾಡಲಿದೆ.ವಾರಣಾಸಿಯ ಸಂಸದರು ಆಗಿರುವ ಪ್ರಧಾನಿ ಮೋದಿ, ಕ್ರಿಕೇಟ್ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ.
