ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಮತದಾನದ ಸಂದರ್ಭದಲ್ಲಿ ಸಿನಿಮೀಯ ಶೈಲಿಯಲ್ಲಿ ಮತಪತ್ರ ದೋಚಿ ಪರಾರಿಯಾದ ಘಟನೆ ನಡೆದಿದೆ. ಮತಗಟ್ಟೆಗೆ ತೆರಳುತ್ತಿದ್ದ ಚುನಾವಣಾಧಿಕಾರಿಗಳ ಕಾರು ಅಡ್ಡಗಟ್ಟಿದ ಗುಂಪೊಂದು, ಮಾರಕಾಸ್ತ್ರ ತೋರಿಸಿ ಮತಪತ್ರಗಳನ್ನು ದೋಚಿದ್ದಾರೆ. ಈ ರೋಚಕ ದೃಶ್ಯವನ್ನು ಸ್ಥಳೀಕರು ಸೆರೆಹಿಡಿದಿದ್ದಾರೆ.
