ಧಾರವಾಡ ಜಿಲ್ಲಾಸ್ಪತ್ರೆ ಆವರಣ ಇವತ್ತು ಪಳ ಪಳ ಹೊಳೆಯುತ್ತಿತ್ತು. ಪರಿಸರವನ್ನು ಕಾಪಾಡಲು ಪಣ ತೊಟ್ಟಿದ್ದ ಧಾರವಾಡ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಇಂದು ಆಸ್ಪತ್ರೆಯ ಆವರಣದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ವೈಧ್ಯರು ಮತ್ತು ಸಿಬ್ಬಂದಿ ಕಸಗೂಡಿಸುವ ಮೂಲಕ ಸಂದೇಶ ರವಾನಿಸಿ ರಾಜ್ಯಕ್ಕೆ ಮಾದರಿಯಾದರು.
ಈ ಸಂದರ್ಭದಲ್ಲಿ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶ್ರೀ ಸಂಗಪ್ಪ ಗಾಬಿ, ಡಾ, ರಾಜೇಂದ್ರ ಹಳ್ಳಿಕೇರಿ, ಡಾ. ಗೌರಮ್ಮ ಬೆಲ್ಲದ, ಡಾ. ಅಶೋಕ, ಡಾ. ಗಿರಿಜಾ ತಾಯಿ ಡಾ. ಕವಿತಾ ಕೋರೆ, ಡಾ. ಮಹೇಶ್ ಚಿತ್ತರಗಿ, ರಮೇಶ ಎಚ್, ರಾಜೇಶ ಕೋನರೆಡ್ಡಿ, ಸಂಧ್ಯಾ ಭಟ್ ವಸಂತಾ ಚಟ್ಟನ್ನವರ ಸೇರಿದಂತೆ ಆಸ್ಪತ್ರೆಯ ಎಲ್ಲ ಖಾಯಂ ಹಾಗೂ ಗುತ್ತಿಗೆ ಆಧಾರದ ಸಿಬ್ಬಂದಿ ಭಾಗವಹಿಸಿದ್ದರು. ಮದಿಹಾಳ ಹಿತರಕ್ಷಣಾ ಸಮಿತಿ, ಲಾಯನ್ಸ್ ಕ್ಲಬ್ ರೋಟರಿ ಕ್ಲಬ್, ಹಾಗೂ ವಿನಯ ಕುಲಕರ್ಣಿ ಅಭಿಮಾನಿ ಬಳಗದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.