ಹುಬ್ಬಳ್ಳಿಯ ಕಾಂಗ್ರೇಸ್ ಮುಖಂಡ ನಾಗರಾಜ ಗೌರಿ ಕುಟುಂಬ, ಮರಾಠಾ ಕಾಲೋನಿಯ ಗಣೇಶನಿಗೆ 25 ಸಾವಿರ ಇಡ್ಲಿಯ ನೈವೇಧ್ಯ ಅರ್ಪಿಸಿದರು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಹೆಸರು ಮಾಡಿರುವ ಗೌರಿ ಕುಟುಂಬ, ಕೊರೋನಾ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ, ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದರು. ಇದೀಗ ಗಣೇಶ ಪೇಟೆಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಗಣೇಶನ ಮುಂದೆ ಗೌರಿ ಕುಟುಂಬ 25 ಸಾವಿರದಷ್ಟು ಇಡ್ಲಿ ಪ್ರಸಾದ ವಿತರಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
