ಬಿಜೆಪಿಗೆ ಸೆಡ್ಡು ಹೊಡೆದು ಹೊರ ಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಸೌಮ್ಯ ಸ್ವಭಾವದ ಜಗದೀಶ ಶೆಟ್ಟರ, ಬಿಜೆಪಿಯ ಮಾಜಿ ಶಾಸಕರನ್ನು ಕಾಂಗ್ರೇಸ್ಸಿಗೆ ಕರೆತರುವ ಮೂಲಕ ಬಿಜೆಪಿ ಖಾಲಿ ಮಾಡಿಸುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಶಿರಹಟ್ಟಿಯ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಮತ್ತು ಮೂಡಿಗೆರೆಯ ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಉಪಮುಖ್ಯಮಂತ್ರಿ, ಡಿ.ಕೆ ಶಿವಕುಮಾರ ಅವರ ಕಡೆ ಕರೆದೋಯ್ದ ಶೆಟ್ಟರ, ಕಾಂಗ್ರೇಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದರು.
