ಕೃಷ್ಣನ ಜನ್ಮ ಸ್ಥಳ ಮಥುರಾದಲ್ಲಿ ಬೆಳಗಿನ ಜಾವ ದೊಡ್ಡ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಮಥುರಾದ ರೈಲು ನಿಲ್ದಾಣದಲ್ಲಿ ಶಕುರ ಬಸ್ತಿ ಇಂದ ಬರುತ್ತಿದ್ದ ರೈಲು ಪ್ಲಾಟ್ ಫಾರ್ಮ್ ಮೇಲೆ ಬಂದಿದೆ. ಅದೃಷ್ಟಾವಶಾತ ಪ್ರಯಾಣಿಕರು ಸುರಕ್ಷಿತವಾಗಿ ರೈಲಿನಿಂದ ಇಳಿದಿದ್ದು, ಯಾರಿಗೂ ಗಾಯಗಳಾಗಿಲ್ಲ. ಈ ರೈಲಿನಲ್ಲಿ ಕರ್ನಾಟಕದ ನಾಲ್ವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಿಲ್ದಾಣದ ನಿರ್ದೇಶಕ ಎಸ್ ಕೆ ಶ್ರೀವಾಸ್ತವ ತಿಳಿಸಿದ್ದಾರೆ.
