ಧಾರವಾಡದಲ್ಲಿ ಈದ್ ಮಿಲಾದ್ ಹಬ್ಬದ ಸಡಗರ ಜೋರಾಗಿತ್ತು. ನಗರದ ವಿವಿಧ ಭಾಗಗಳಿಂದ ಡಿಜೆ ಹಚ್ಚಿಕೊಂಡು ಬಂದ ಯುವಕರ ತಂಡ ಧಾರವಾಡದ ಅಂಜುಮನ್ ಸಂಸ್ಥೆಗೆ ಬಂದು ತಲುಪಿದವು. ಅಲ್ಲಿಂದ ಸಾಲು ಸಾಲಾಗಿ ಜನ ಡಿಜೆ ಹಚ್ಚಿಕೊಂಡು ಮೆರವಣಿಗೆಯಲ್ಲಿ ಹೊರಟರು. ಮೆರವಣಿಗೆಯೊಂದು ವಿವೇಕಾನಂದ ಸರ್ಕಲ್ ಬಳಿ ಬಂದಾಗ, ಎರಡು ಡಿಜೆ ಗಳ ಮಧ್ಯೆ ಪೈಪೋಟಿ ಏರ್ಪಟ್ಟಿತು. ಒಬ್ಬರನ್ನೊಬ್ಬರು ಚಾಲೆಂಜ್ ಮಾಡುತ್ತಾ ಸೌಂಡ್ ಹಚ್ಚಲು ಶುರು ಮಾಡಿದರು. ಸೌಂಡ್ ನಲ್ಲಿ ನಾನೇ ನಂಬರ ಒನ್ ಎಂದು ಕಿರುಚಾಡಿದ ಒಂದು ಡಿಜೆ, ನಾನು ಬಂದೇನಿ ತಡಿ ಎಂದು ಇನ್ನೊಂದು ಡಿಜೆ ಯವರು ಹೇಳಿದಾಗ, ಅಲ್ಲಿ ಸೇರಿದ್ದ ಯುವಕರ ತಂಡ ಕೇಕೆ ಹಾಕಿತು.
ಸೌಂಡ್ ನಲ್ಲಿ ನಾನು ಮೇಲು, ನಾನು ಮೇಲು ಎಂದು ಪೈಪೋಟಿಗೆ ಬಿದ್ದಾಗ, ಎದುರಿನಲ್ಲಿದ್ದ ಡಿಜೆ ಯ ಒಂದು ತಂಡದ ಸದಸ್ಯ, ಅಶ್ಲೀಲ ಪದ ಬಳಕೆ ಮಾಡಿದ. ಆವಾಗ ಕೇಳಿ ಬಂತು ನೋಡಿ ಅಶ್ಲೀಲ ಪದ. ಆ ಪದ ಬಳಕೆ ಕೇಳುತ್ತಲೇ, ಮೆರವಣಿಗೆ ನೋಡಲು ಬಂದಿದ್ದವರು ಅಲ್ಲಿಂದ ಹೊರಟರು. ” ಚಲ್ ಬೋಸಡಿಕೆ ” ಎಂಬ ಅಶ್ಲೀಲ ಪದ, ಅಲ್ಲಿ ಸೇರಿದವರ ಸಿಟ್ಟಿಗೆ ಕಾರಣವಾಯ್ತು.
ಅಂಜುಮನ್ ಇಸ್ಲಾಮ್ ಸಂಸ್ಥೆಯವರಿಗೆ ಇದು ಗೊತ್ತಾಗಿದೆಯೋ ಇಲ್ಲವೂ ಗೊತ್ತಿಲ್ಲ. ಇನ್ನೂಮ್ಮೆ ಮೆರವಣಿಗೆಯಲ್ಲಿ ಸಭ್ಯವಾಗಿ ವರ್ತಿಸುವಂತೆ ಹೇಳಿದರೆ ಉತ್ತಮ.
ಗಮನಕ್ಕೆ – ಅಶ್ಲೀಲ ಪದ ಬಳಕೆ ರಿಕಾರ್ಡ್ ಆಗಿರುವದರಿಂದ ಅದನ್ನು ಇಲ್ಲಿ ಹಾಕಿಲ್ಲ.