ಜೆಡಿಎಸ್ ಬಿಜೆಪಿ ಮೈತ್ರಿಯಾದ ಬೆನ್ನಲ್ಲೇ, ಮಾಧ್ಯಮಗಳಿಂದ ದೂರ ಇರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ ಅಕ್ಟೋಬರ್ 16 ರಂದು ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ಸಿ ಎಮ್ ಎ ಫಂಕ್ಷನ ಹಾಲ್ ನಲ್ಲಿ ಚಿಂತನ ಮಂಥನ ಸಭೆ ಕರೆದಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ನಾಯಕರ ಮೇಲೆ ಮುನಿಸಿಕೊಂಡಿರುವ ತುಮಕೂರಿನ ಮಾಜಿ ಶಾಸಕ ಶಫಿ ಅಹ್ಮದ ಜೆಡಿಎಸ್ ಗೆ ರಾಜೀನಾಮೆ ನೀಡಿದ್ದು, ಅಲ್ಪಸಂಖ್ಯಾತರರು ಜೆಡಿಎಸ್ ದಿಂದ ದೂರವಾಗುತ್ತಿದ್ದಾರೆ.
ಸಧ್ಯ ಇದೆಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ ಚಿಂತನ ಮಂಥನ ಕಾರ್ಯಕ್ರಮ ನಡೆಸಲು ಸಜ್ಜಾಗಿದ್ದಾರೆ. ಸಿ ಎಮ್ ಇಬ್ರಾಹಿಂ ಆ ಸಭೆಯಲ್ಲಿ ಅಲ್ಪಸಂಖ್ಯಾತರ ಅಭಿಪ್ರಾಯ ಆಲಿಸಲಿದ್ದಾರೆ.