ಕಾವೇರಿ ವಿಷಯವಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದೆ. ಬೆಳಿಗ್ಗೆ ರಸ್ತೆಗಿಳಿದಿದ್ದ ವಿವಿಧ ಸಂಘಟನೆಗಳು, ಕೆಲಕಾಲ ಹೋರಾಟಕ್ಕೆ ಸಾಕ್ಷಿ ಒದಗಿಸಿದೆ. ಧಾರವಾಡ ಎಂದಿನಂತೆ ತೆರೆದುಕೊಂಡಿದ್ದು, ಶಾಲೆ, ಕಾಲೇಜು, ಕಚೇರಿಗಳು, ಮತ್ತು ವಾಹನ ಸಂಚಾರ ಎಂದಿನಂತೆ ಇದೆ. ಕೆಲವೊಂದಿಷ್ಟು ಕಾಲ ಪ್ರತಿಭಟನೆ ಮಾಡಲು ಅವಕಾಶ ಕೊಟ್ಟ ಪೊಲೀಸರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
