ನನ್ನ ಅಧಿಕಾರದ ಅವಧಿ ಮುಗಿಯುವದರೊಳಗಾಗಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಎಚ್.ಬಿ.ಆರ್ ಲೇ ಔಟ್ ನಲ್ಲಿ ನಡೆದ ನೂತನ ಬ್ಯಾರಿ ಸೌಹಾರ್ದ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು ಎಂದು ಹೇಳಿದರು.
ಮೊದಲು ಮುಸ್ಲಿಂರ ಅಭಿವೃದ್ಧಿಗೆ 400 ಕೋಟಿ ಹಣ ಮೀಸಲಿಟ್ಟಿದ್ದರು. ಆ ಬಳಿಕ ಅನುದಾನವನ್ನು 3 ಸಾವಿರ ಕೋಟಿಗೆ ಏರಿಸಿದ್ದೇ ಎಂದರು. ರಾಜ್ಯದಲ್ಲಿ ನಾವು ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.