ಧಾರವಾಡ APMC ಮಾರುಕಟ್ಟೆಯಲ್ಲಿ ಕಾಯಿಪಲ್ಲೇಗೆ ಇದ್ದ ಮಾನ ಹೋಗಿದೆ. ಖರೀದಿ ಮಾಡಿದವನೇ ಜಾಣ ಎಂಬಂತಾಗಿದೆ. ಬರಗಾಲದಲ್ಲಿ ಹೇಗಾದರು ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡು ಕಾಯಿಪಲ್ಲೇ ಬೆಳೆದ ರೈತ ಇದೀಗ ಕೈ ಕೈ ಹಿಚುಕಿ ಕೊಳ್ಳುತ್ತಿದ್ದಾನೆ. ಕಾಯಿಪಲ್ಲೇ ಬೆಲೆ ದಿಡೀರ್ ಕುಸಿತದಿಂದ ಕಂಗಾಲಾಗಿದ್ದೇನೆ.
ಇವತ್ತಿನ ಹೋಲ್ ಸೇಲ್ ಕಾಯಿಪಲ್ಲೇ ದರ ಇಲ್ಲಿದೆ ನೋಡಿ
ಪ್ರತಿ ಹತ್ತು ಕೆಜಿ ಹಸಿಮೆಣಸಿನಕಾಯಿಗೆ 250 ರಿಂದ 300 ರೂಪಾಯಿ.
22 ಕೆಜಿಯ ಒಂದು ಬಾಕ್ಸ್ ಟಮೇಟೋ ಗೆ ಕೇವಲ 100 ರೂಪಾಯಿ.
18 ಕೆಜಿಯ ಒಂದು ಬಾಕ್ಸ್ ಬದ್ನೇಕಾಯಿಗೆ 200 ರೂಪಾಯಿ.
22 ಕೆಜಿ ಕ್ಯಾಬೀಜ ಬೆಲೆ ಕೇವಲ 100 ರೂಪಾಯಿ.
ಹತ್ತು ಕೆಜಿ ಬೀನ್ಸ್ ಗೆ 300 ರಿಂದ 350 ರೂಪಾಯಿ.
ಹತ್ತು ಕೆಜಿ ಆಲೂಗಡ್ಡೆ ಬೆಲೆ 200 ರಿಂದ 225 ರೂಪಾಯಿ.
ಒಂದು ಡಜನ್ ಫ್ಲಾವರ ಬೆಲೆ ಕೇವಲ 150 ರೂಪಾಯಿ.
14 ಕೆಜಿ ಹಿರೇಕಾಯಿಗೆ ಕೇವಲ 100 ರೂಪಾಯಿ.
ಇನ್ನು ಕೋತಂಬರಿ, ಪುದಿನಾ, ಮೆಂತೆ, ಸಬ್ಬಸಿಗೆ ಸೇರಿದಂತೆ ಸೂಪ್ಪಿನ ಬೆಲೆ ತುಸು ಏರಿಕೆಯಾಗಿದೆ.