ಯಾದಗಿರಿ, ಕರ್ನಾಟಕದ ಅತ್ಯಂತ ಬಡ ಜಿಲ್ಲೆಯಾಗಿದೆ. ಮಾರ್ಚ್ 2023 ರಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ಹೊರಗೆ ಬಿದ್ದಿದೆ. ಕರ್ನಾಟಕದ ಅತ್ಯಂತ ಬಡ ಜಿಲ್ಲೆಯಾದ ಯಾದಗಿರಿಯಲ್ಲಿ ನಡೆಸಿದ ಸಮೀಕ್ಷೆಯು ಮೂರು ವರ್ಷದೊಳಗಿನ 64% ಮಕ್ಕಳು ಅಪೌಷ್ಟಿಕತೆ, ಕಡಿಮೆ ತೂಕವನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಬಡ ಜಿಲ್ಲೆ ಎಂದು ಕರೆಸಿಕೊಳ್ಳಲು ಹಲವು ಕಾರಣಗಳನ್ನು ಮುಂದಿಟ್ಟಿದೆ. ಯಾದಗಿರಿ, ಬಡತನಕ್ಕೆ ಆರೋಗ್ಯ, ಪೌಷ್ಠಿಕಾಂಶ, ಶಿಕ್ಷಣ, ಕೃಷಿ, ಕೌಶಲ್ಯ ಅಭಿವೃದ್ಧಿ ಇಂದ ಕುಂಠಿತಗೊಂಡಿದ್ದು ಕಾರಣವಾಗಿದೆ.
ನೀತಿ ಆಯೋಗದಿಂದ ಗುರುತಿಸಲ್ಪಟ್ಟ ದೇಶದ 112 ಜಿಲ್ಲೆಗಳಲ್ಲಿ ಯಾದಗಿರಿಯೂ ಸೇರಿದೆ. ಇದು ದಶಕಗಳಿಂದ ಸರ್ಕಾರದ ನಿರ್ಲಕ್ಷ್ಯದ ಪ್ರವೃತ್ತಿಯನ್ನು ತೋರಿಸುತ್ತದೆ. ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದರು ಸ್ಥಿತಿ ಬದಲಾಗಿಲ್ಲ ಯಾದಗಿರಿ ಸ್ಥಿತಿ ಬದಲಾಗಿಲ್ಲ.