ಮನೆಯಲ್ಲಿ ಮಕ್ಕಳ ಹುಟ್ಟುಹಬ್ಬ ಬಂತೆಂದರೆ ಸಾಕು, ಬಟ್ಟೆ ಮತ್ತು ಕೇಕ್ ತರುವದರಿಂದ ಹಿಡಿದು, ಹುಟ್ಟುಹಬ್ಬ ಹೇಗೆ ಆಚರಿಸಬೇಕು, ಯಾರನ್ನೆಲ್ಲ ಕರೆಯಬೇಕು, ಎಂದೆಲ್ಲ ಪ್ಲಾನ್ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಪ್ರೀತಿಯಿಂದ ಸಾಕಿದ ಶ್ವಾನಗಳ ಹುಟ್ಟುಹಬ್ಬಕ್ಕೂ ಚನಶೆಟ್ಟಿ ಕುಟುಂಬ ಅದೇ ಮಾದರಿ ಅನುಸರಿಸಿದೆ. ಧಾರವಾಡದ ಶ್ವಾನಪ್ರೀಯರೊಬ್ಬರು, ತಮ್ಮ ಮನೆಯಲ್ಲಿರುವ ಮುದ್ದಿನ ಶ್ವಾನಗಳ ಹುಟ್ಟುಹಬ್ಬ ಆಚರಣೆ ಅದ್ದೂರಿಯಾಗಿ ಮಾಡಿದ್ದಾರೆ. ಶ್ವಾನಗಳಿಗೆ ಆರತಿ ಮಾಡುವ ಮೂಲಕ, ದೀರ್ಘಆಯುಷ್ಯಕ್ಕೆ ಪ್ರಾರ್ಥಿಸಿದ್ದಾರೆ.
ಧಾರವಾಡದ ಶ್ವಾನಪ್ರೀಯ, ಸೋಮಶೇಖರ ಚೆನ್ನಶೆಟ್ಟಿ ಎಂಬುವವರು ಸೂಜಿ ಮತ್ತು ಚಾರ್ಲಿ ಎಂಬ ಎರಡು ಜರ್ಮನ್ ಸೆಫರ್ಡ್ ತಳಿಯ ಶ್ವಾನಗಳ ಜನ್ಮದಿನವನ್ನು ಆಚರಿಸಿದ್ದಾರೆ. ಮನೆ ಮಕ್ಕಳ ಜನ್ಮ ದಿನದ ಆಚರಣೆಯಂತೆಯೇ ಸೋಮಶೇಖರ ಚೆನಶೆಟ್ಟಿ, ಶ್ವಾನಗಳ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
ಸೋಮಶೇಖರ, ಧಾರವಾಡದ ಪ್ರಖ್ಯಾತ ಶ್ವಾನಪ್ರೀಯರಾಗಿದ್ದಾರೆ. ಪ್ರತಿ ದಿನ, ಧಾರವಾಡದ ಇನ್ನೂರಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರಾತ್ರಿ ಹೊತ್ತು ಆಹಾರ ನೀಡುತ್ತಾರೆ. ಮತ್ತು ಅವುಗಳ ಆರೋಗ್ಯದ ಮೇಲೆ ನಿಗಾ ವಹಿಸುತ್ತಾರೆ. ಬಿ ಎಸ್ ಸಿ ಪದವೀದರರಾಗಿರುವ ಸೋಮಶೇಖರ, ಖಾಸಗಿ ಕೆಲಸ ಮಾಡುತ್ತಾ, ಬೀದಿ ನಾಯಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.