ಶಾಂತಿ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ಜೊತೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಪೂಜ್ಯ ಮಹಾತ್ಮಾ ಗಾಂಧಿಯವರ ಇಂದು 154 ನೇ ಜಯಂತಿ ಆಚರಣೆ ಮಾಡಲಾಗುತ್ತಿದೆ. ಮಹಾತ್ಮಾ ಗಾಂಧೀ ಬರಿ ದೇಶಕ್ಕಲ್ಲ, ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಮಂತ್ರ ಭೋಧಿಸಿದ್ದಾರೆ. ಎರಡನೇ ಮಹಾಯುದ್ದ ತಪ್ಪಿಸಲು ಮಹಾತ್ಮಾ ಗಾಂಧಿಯವರು 23-07-1939 ರಂದು ಅಡಾಲ್ಫ್ ಹಿಟ್ಲರ್ ಗೆ ಪತ್ರ ಬರೆದಿದ್ದರು.
ಹಿಟ್ಲರ್ ಗೆ ಬಾಪು ಬರೆದ ಪತ್ರದ ಸಾರಾಂಶ ಹೀಗಿದೆ
ಆತ್ಮೀಯ ಸ್ನೇಹಿತ, ಅಡಾಲ್ಫ್ ಹಿಟ್ಲರ್,
ಮಾನವೀಯತೆಯ ಸಲುವಾಗಿ ನನ್ನ ಸ್ನೇಹಿತರು ನಿಮಗೆ ಪತ್ರ ಬರೆಯುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದು ಅಪ್ರಸ್ತುತವಾಗತ್ತೆ ಅನ್ನೋ ಭಾವನೆಯಿಂದ ಸುಮ್ಮನಿರುವ ಬದಲು ಸಂಬಂಧಗಳು ಮೌಲ್ಯಯುತವಾಗಿರಸಲು ಪತ್ರ ಬರೆಯುತ್ತಿದ್ದೇನೆ.
ಯುದ್ಧವನ್ನು ತಡೆಯುವ ಶಕ್ತಿ ಹೊಂದಿದ ವಿಶ್ವದ ಏಕೈಕ ವ್ಯಕ್ತಿ ನೀವಾಗಿರುವದರಿಂದ ನಿಮಗೆ ಈ ಪತ್ರ ಬರೆದಿದ್ದೇನೆ. ಎರಡನೇ ವಿಶ್ವ ಯುದ್ಧ ಗೋಚರಿಸುತ್ತಿದೆ. ಯುದ್ಧ ಸಮಸ್ಯೆಗೆ ಪರಿಹಾರವಲ್ಲ ಎಂಬುದು ನನ್ನ ಅನಿಸಿಕೆ. ಯುದ್ಧದ ಕಲ್ಪನೆಯಿಂದ ದೂರ ಇರುವ ವ್ಯಕ್ತಿಯ ಮನವಿಯನ್ನು ಪುರಸ್ಕರಿಸುತ್ತಿರಾ? ನಾನು ನಿಮಗೆ ಬರೆಯುವಲ್ಲಿ ತಪ್ಪು ಮಾಡಿದ್ದರೆ ನಿಮ್ಮ ಕ್ಷಮೆಯನ್ನು ನಾನು ನಿರೀಕ್ಷಿಸುತ್ತೇನೆ.
ಇಂತಿ
ನಾನು ನಿಮ್ಮ ಪ್ರಾಮಾಣಿಕ ಸ್ನೇಹಿತ