ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿರುವ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಸಚಿವ ಎಚ್ ಸಿ ಮಹಾದೇವಪ್ಪ ಟಾಂಗ್ ನೀಡಿದ್ದಾರೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರ ಹೇಳಿಕೆಗೆ ಮಹಾದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಜಾತಿ ಆಧಾರದ ಮೇಲೆ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಎಲ್ಲ ಜಾತಿ ಧರ್ಮೀಯರೂ ಸಮಾಜದ ಅಂಗವಾಗಿದ್ದು ಎಲ್ಲರನ್ನೂ ಒಳಗೊಂಡೇ ನಾವು ಆಡಳಿತ ನಡೆಸಬೇಕಿದೆ. ಇನ್ನು ಸಂಪುಟದಲ್ಲಿ ಸಮುದಾಯಗಳಿಗೆ ನೀಡಲಾದ ಪ್ರಾತಿನಿಧ್ಯವು ನ್ಯಾಯಬದ್ಧವಾಗೇ ಇದ್ದು ಅಧಿಕಾರಿ ವಲಯದಲ್ಲೂ ಎಲ್ಲ ವರ್ಗಗಳ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.
ಶಾಮನೂರು ಹೇಳಿಕೆ ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಒಬ್ಬರ ಮೇಲೆ ಒಬ್ಬರಂತೆ ಶಿವಶಂಕರಪ್ಪನವರ ಹೇಳಿಕೆಗೆ ತಿರುಗೇಟು ನೀಡುತ್ತಿದ್ದಾರೆ.