ವಿಶ್ವದಲ್ಲಿ ಅತಿ ದೊಡ್ಡ ಕೋಚ್‌ಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಭಾರತದ ರೈಲ್ವೆ ಕೋಚ್ ಫ್ಯಾಕ್ಟರಿಯೂ ಒಂದು. ಭವಿಷ್ಯದ 4-5 ವರ್ಷಗಳಲ್ಲಿ 300 ವಂದೇ ಭಾರತ್ ರೈಲುಗಳು ಸಂಚರಿಸುವ ಲಕ್ಷಣಗಳು ಕಂಡು ಬರುತ್ತಿವೆ . ಈ ವಂದೇ ಭಾರತ್ ರೈಲುಗಳು ವಿಶ್ವದರ್ಜೆಯ ಗುಣಮಟ್ಟ ಹೊಂದಿದೆ. ಸ್ವಯಂಚಾಲಿತ ಬಾಗಿಲುಗಳು, ಪ್ರಯಾಣಿಕರಿಗೆ ಜಿಪಿಎಸ್ ಆಧಾರಿತ ಮಾಹಿತಿ, ವೈ-ಫೈ ಒದಗಿಸಲಾಗಿದೆ. ಗರಿಷ್ಠ ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ದೇಶದ ಮೊದಲ ಒಂದೇ ಭಾರತ್ ಕೋಚ್ ತಯಾರಾಗಿದ್ದು ಚೆನ್ನೈನ ಇಂಟಿಗ್ರೆಟೆಡ್ ಕೋಚ್ ಫ್ಯಾಕ್ಟರಿಯಲ್ಲಿ. 2019ರ ಫೆಬ್ರವರಿ 15ರಂದು ಪ್ರಧಾನಿ ಮೋದಿ, ಮೊದಲ ವಂದೇ ಭಾರತ್ ರೈಲನ್ನು ಲೋಕಾರ್ಪಣೆ ಮಾಡಿದ್ದರು. ಈಗ ಮತ್ತೆ ಅಂತಹ 10 ರೈಲುಗಳು ಸಿದ್ಧವಾಗಿದ್ದು, ಎಲ್ಲದಕ್ಕೂ ಬಿಳಿ ಬಣ್ಣವನ್ನು ತೊಡಿಸಲಾಗಿದೆ.
ದೂರದ ಪ್ರಯಣಿಕರ ಅನುಕೂಲಕ್ಕಾಗಿ ವಂದೇ ಭಾರತ್ ರೈಲುಗಳಲ್ಲಿ ಸ್ಲೀಪರ್ ಕೋಚ್ ಗಳನ್ನು ಅಳವಡಿಸುವುದಾಗಿ ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದರು. ಈ ನಿಟ್ಟಿನಲ್ಲಿ ಸೀಪರ್ ಕೋಚ್‌ಗಳ ತಯಾರಿಕೆಗೆ ತಿತಾಗಡ್ ರೈಲ್ ಸಿಸ್ಟಮ್ಸ್ ಮತ್ತು ಬಿಎಚ್‌ಇಎಲ್ ಜತೆಯಲ್ಲಿ ಸುಮಾರು 24,000 ಕೋಟಿ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. 2029ರೊಳಗೆ 80 ಸೀಪರ್ ಕೋಚ್‌ಗಳು ಹಳಿಗಳ ಮೇಲೆ ಸಂಚರಿಸಲಿವೆ.
ನಂತರ ಹಂತ ಹಂತವಾಗಿ ಈ ಕೋಚ್ ಗಳ ತಯಾರಿ ನಡೆಯಲಿದೆ. ಈ ಸ್ಲೀಪರ್ ಕೋಚ್ ರೈಲುಗಳಲ್ಲಿ 16 ಬೋಗಿಗಳು ಇರಲಿವೆ. ಪ್ರತಿ ರೈಲಿನಲ್ಲಿ 887 ಪ್ರಯಾಣಿಕರಿಗೆ ಅವಕಾಶ ಲಭ್ಯವಾಗಲಿದೆ. ಈ ರೈಲೂ ಸಹ ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.