ರಾಜ್ಯ ಕಾಂಗ್ರೇಸ್ ಸರ್ಕಾರ ನೂರು ದಿನ ಪೂರೈಸಿದರ ಬೆನ್ನಲ್ಲೇ ಲಿಂಗಾಯತ ಸಮರ, ಆಡಳಿತಾರೋಡ ಕಾಂಗ್ರೇಸ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಎಲ್ಲ ಪಕ್ಷ ಸೇರಿ 74 ಲಿಂಗಾಯತ ಶಾಸಕರು ಇದ್ದೇವೆ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ. ಆಯಕಟ್ಟಿನ ಸ್ಥಾನ ನೀಡದೆ ಇರುವದು ಶಾಮನೂರು ಶಿವಶಂಕರಪ್ಪನವರ ಸಿಟ್ಟಿಗೆ ಕಾರಣವಾಗಿದೆ. ರಾಷ್ಟ್ರೀಯ ವೀರಶೈವ ಮಹಾಸಭಾದ ಅಧ್ಯಕ್ಷರು ಆಗಿರುವ ಶಿವಶಂಕರಪ್ಪ, ಲಿಂಗಾಯತ ಅಧಿಕಾರಿಗಳ ಬೆನ್ನಿಗೆ ನಿಂತಿದ್ದು, ವಿಪಕ್ಷ ಬಿಜೆಪಿ ಸಹ ದ್ವನಿಗೂಡಿಸಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾಂಗ್ರೇಸ್ ಸರ್ಕಾರ ಲಿಂಗಾಯತ ಸಮಾಜವನ್ನು ಕಡೆಗಣನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ, ಕಾಂಗ್ರೇಸ್ ಸಚಿವರುಗಳು ಸಾಲು ಸಾಲಾಗಿ ಶಿವಶಂಕರಪ್ಪನವರ ಹೇಳಿಕೆಗೆ ಪ್ರತಿಕ್ರೀಯೆ ನೀಡುತ್ತಿದ್ದಾರೆ. ಕಾಂಗ್ರೇಸ್ ಸರ್ಕಾರದಲ್ಲಿ 7 ಜನರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಅಲ್ಲದೆ ಅಧಿಕಾರಿಗಳನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಜಾತಿ ಜನಾಂಗದ ಆಧಾರದ ಮೇಲೆ ಆಡಳಿತ ನಡೆಸಲು ಅವಕಾಶವಿಲ್ಲ. ಕಾಂಗ್ರೇಸ್ ಸರ್ಕಾರ, ಎಲ್ಲ ವರ್ಗದ ಅಧಿಕಾರಿಗಳನ್ನು ಸಮನಾಗಿ ನೋಡಿಕೊಂಡು ಹೋಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಸಧ್ಯ ರಾಜ್ಯದಲ್ಲಿ ಲಂಗಾಯತ ಸಮರ ಜೋರಾಗಿದ್ದು, ಬಿರುಕು ಮೂಡುವ ಲಕ್ಷಣಗಳು ಕಂಡು ಬರುತ್ತಿವೆ.