ಹೆಸರು ಸಂತೋಷ ಲಾಡ್!
ಸಂಡೋರಿನಿಂದ ರಾಜಕೀಯ ಜರ್ನಿ ಆರಂಭಿಸಿ, ಕರ್ನಾಟಕದ ರಾಜಕಾರಣದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಹೆಸರಿದು. ರಾಜಕಾರಣಕ್ಕೆ ಬಂದು ಇಲ್ಲಿವರೆಗೆ ಕಳೆದುಕೊಂಡಿದ್ದು 500 ಕೋಟಿ……..
ಇದು ಸ್ವತಃ ಸಂತೋಷ ಲಾಡ್ ಅವರೇ ಹೇಳಿದ ಮಾತಿದು. 17 ನೇ ವಯಸ್ಸಿಗೆ ರಾಜಕಾರಣಕ್ಕೆ ಬಂದ ಸಂತೋಷ ಲಾಡ್ ಅವರಿಗೆ ಇದೀಗ 48 ರ ಹರೆಯ. ಸಾಮಾಜಿಕ ಕಳಕಳಿ ಇರುವ ಕೆಲವೇ ಕೆಲವು ಮಂತ್ರಿಗಳ ಪೈಕಿ ಸಂತೋಷ ಲಾಡ್ ಸಹ ಒಬ್ಬರು. ಮನಸ್ಸು ಮೃದುವಾದರು, ತಾವೇ ಮೋಸ ಹೋದವರು. ನಿನ್ನೇ ಯಾಕೋ ಸಂತೋಷ ಲಾಡ್, ಸಂತೋಷದ ಮಧ್ಯೆ ಎದುರಿಸಿದ ಕಷ್ಟಗಳ ಬಗ್ಗೆ ಭಾವನಾತ್ಮಕವಾಗಿದ್ದರು. ಸಧ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿ, ಸಮಾಜ ಎಚ್ಚರಗೊಳ್ಳದಿದ್ದಲ್ಲಿ ಮುಂದಿನ ದಿನಗಳು ಕಷ್ಟದ ದಿನಗಳಾಗಲಿವೆ ಎಂದು ಹೇಳಿದರು. ಕರ್ನಾಟಕ ಕ್ಷತ್ರಿಯ ಒಕ್ಕೂಟ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಸಂತೋಷ ಲಾಡ್ ರ ಮಾತಿಗೆ ತಲೆದೋಗಿತು. ಕ್ಷತ್ರಿಯ ಸಮಾಜವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಒಂದುಗೂಡದೆ ಹೋದರೆ ಕಷ್ಟ ಕಷ್ಟ…. ಎನ್ನುವ ಮೂಲಕ ತಾವು ಎದುರಿಸಿದ ಕಷ್ಟವನ್ನು ಸಭೆಯ ಮುಂದೆ ತೆರೆದಿಟ್ಟರು. ರಾಜಕೀಯ ಸಾಕು ಬೀಡು ಎಂದು ನನಗೆ ಧರ್ಮಪತ್ನಿ ಹೇಳ್ತಾಳೆ, ನನಗ್ಯಾವ ಚಟವೂ ಇಲ್ಲ. ಕುಡಿಯೋ ಚಟ, ಸೇದುವ ಚಟ , ಇಸ್ಪೇಟ್ ಚಟ ಯಾವದು ಇಲ್ಲ. ಆದ್ರೆ ರಾಜಕೀಯ ಚಟ ಇದೆ. ಇಲ್ಲಿಯವರೆಗೆ ರಾಜಕಾರಣದಲ್ಲಿ 500 ಕೋಟಿ ಕಳೆದುಕೊಂಡಿದ್ದೇನೆ. ನಾನು ವರ್ಗಾವಣೆ ಧಂಧೆಯಲ್ಲಿ ಹಣ ಮಾಡಿಕೊಳ್ಳುವದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಸಂತೋಷ ಲಾಡ್ ಹೇಳಿದರು. ರಾಜಕೀಯ ಬಿಟ್ಟರೆ ನನಗೆ ಹೆಚ್ಚು ಅನುಕೂಲ ಇದೆ ಎಂದರು