Download Our App

Follow us

Home » ಜೀವನಶೈಲಿ » ಮಗನಿಗೆ ಕನ್ನ್ಯೆ ಸಿಗದ ಕಾರಣಕ್ಕೆ ಹಿಂದು ಸಂಪ್ರದಾಯಕ್ಕೆ ಮೋರೆ ಹೋದ ಧಾರವಾಡದ ಮುಸ್ಲಿಂ ಕುಟುಂಬ.

ಮಗನಿಗೆ ಕನ್ನ್ಯೆ ಸಿಗದ ಕಾರಣಕ್ಕೆ ಹಿಂದು ಸಂಪ್ರದಾಯಕ್ಕೆ ಮೋರೆ ಹೋದ ಧಾರವಾಡದ ಮುಸ್ಲಿಂ ಕುಟುಂಬ.

ಧಾರವಾಡದ ಮುಸ್ಲೀಂ ಕುಟುಂಬವೊಂದು ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದ್ದಾರೆ.

ಕಾರ್ಪೆಂಟರ್ (Carpenter) ಕೆಲಸ ಮಾಡುವ ಕುಟುಂಬವೊಂದು ಧಾರವಾಡದ ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ,ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನವನ್ನು, ಗೋಕರ್ಣದ ಪಿತೃಶಾಲೆಯಲ್ಲಿ ಪೂರೈಸಿದ್ದಾರೆ.

ಇವರು ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಇವರ ಕುಟುಂಬ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಬೆಳೆದವರಾಗಿದ್ದಾರೆ, 

ತಮ್ಮನಿಗೆ ಮದುವೆ ಸಂಬಂಧ ಸರಿಯಾಗಿ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಮೊರೆ ಹೋಗಿದ್ದರಂತೆ. ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗ ಏಳಿಗೆ ಸಿಗಲಿ ಎಂಬ ಉದ್ಧೇಶದಿಂದ ಈ ಕಾರ್ಯ ಮಾಡಿದ್ದಾರಂತೆ.

ಜ್ಯೋತಿಷಿ ತೋರಿಸಿದ ಮಾರ್ಗದರ್ಶನದಂತೆ ಗೋಕಣಕ್ಕೆ ಬಂದು ಕ್ಷೇತ್ರ ಪುರೋಹಿತರಾದ ವೇ. ನಾಗರಾಜ ಭಟ್ ಗುರ್ಲಿಂಗ್ ಹಾಗೂ ವೇ. ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ.

ಗೋಕರ್ಣದಲ್ಲಿ ಕ್ರಿಸ್ಚನ್ ಸಮುದಾಯದವರು ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲೀಂ ಕುಟುಂಬ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪಿತೃಕಾರ್ಯ ಮಾಡಿದ್ದು ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!