ಬೆಂಗಳೂರಿನ ಗುತ್ತಿಗೆದಾರನ ಮನೆಯ ಮೇಲೆ ಐ ಟಿ ದಾಳಿ ನಡೆದ ಹಿನ್ನೇಲೆಯಲ್ಲಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಪಂಚರಾಜ್ಯಗಳ ಚುನಾವಣೆಗೆ, ಕಾಂಗ್ರೇಸ್ ಕಡೆಯಿಂದ ಈ ಹಣ ಹೋಗುತ್ತಿತ್ತು ಎಂದು ಆರೋಪಿಸಿದರು.
ಈ ಮಧ್ಯೆ ಪೊಲೀಸ್ ಅಧಿಕಾರಿಗಳ ಮುಂದೆಯೇ ATM ಮುಖ್ಯಮಂತ್ರಿ ಮತ್ತು ATM ಉಪ ಮುಖ್ಯಮಂತ್ರಿ ಎಂದು ಬರೆದಿರುವ ಫಲಕಗಳನ್ನು ಪೊಲೀಸ್ ಬ್ಯಾರಿಕೇಡ ಮೇಲೆ ಅಂಟಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಪಾಲಿಕೆಯ ಸದಸ್ಯರು ಭಾಗವಹಿಸಿದ್ದರು.