Download Our App

Follow us

Search
Close this search box.
Home » 404 – Page Not Found

ಬಿಪಿಎಲ್ ಮತ್ತು ಎಪಿಎಲ್​ (APL) ಕಾರ್ಡ್​ದಾರರಿಗೆ ಆಹಾರ ಇಲಾಖೆ ಗುಡ್​ ನ್ಯೂಸ್​

ಬಿಪಿಎಲ್​​ ಮತ್ತು ಎಪಿಎಲ್​​​​ ಕಾರ್ಡ್​​​​ ತಿದ್ದುಪಡಿಗೆ ಸರ್ಕಾರ ಮತ್ತೆ ಅವಕಾಶ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸುತ್ತೋಲೆ ಹೊರಡಿಸಿದೆ. ಬಿಪಿಎಲ್ ಮತ್ತು ಎಪಿಎಲ್​ ಕಾರ್ಡ್​​ ತಿದ್ದುಪಡಿಗೆ ಹೆಚ್ಚಿನ ಸಮಯ‌ ನೀಡುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಮಯವನ್ನು ವಿಸ್ತರಿಸಿದೆ. 

# ಈ ಬಾರಿ ಬೆಂಗಳೂರಿನಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಿಲ್ಲ # 

ಕೇವಲ ತಿದ್ದುಪಡಿಗೆ ಹೆಚ್ಚಿನ ಸಮಯದ ನೀಡಿ ಎಂದು ಬೇಡಿಕೆ ಬಂದ ಜಿಲ್ಲೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. 

# ಈ ಬಾರಿ ಸರ್ವರ್ 2 ಮತ್ತು 3ರಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ # 

# ಸರ್ವರ್ 2:  ಬಾಗಲಕೋಟೆ, ಬೆಳಗಾವಿ, ಚಾಮರಾಜಪೇಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ,

ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ದಿನಾಂಕ 16, 17 ಮತ್ತು 18 ನೇ ತಾರೀಖಿನಂದು ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ತಿದ್ದಪಡಿ ಮಾಡಿಕೊಳ್ಳಬಹುದಾಗಿದೆ.

# ಸರ್ವರ್​ 3:  ಬಳ್ಳಾರಿ, ಬಿದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ , ಕಲಬುರಗಿ, ಕೋಲಾರ, ಕೊಪ್ಪಳ,

ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ದಿನಾಂಕ, 19,20, 21ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಈ ಹಿಂದೆ ಆಹಾರ ಇಲಾಖೆ ಅ.5 ರಿಂದ 13ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಕಾಲಾವಕಾಶ ನೀಡಿತ್ತು. 9 ದಿನಗಳಲ್ಲಿ ಒಟ್ಟು 60 ರಿಂದ 70 ಸಾವಿರದಷ್ಟು ಅರ್ಜಿಗಳು ಬಂದಿದ್ದವು. 

ಆಹಾರ ಇಲಾಖೆ ಈಗಾಗಲೇ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿದೆ. ಅರ್ಜಿ ಜೊತೆ ನೀಡಿರುವ ದಾಖಲೆಗಳು ಸರಿ ಇದ್ದರೇ ಮಾತ್ರ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ತಿಳಿಸಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಕ್ಷಿದಾರ ಇದ್ದಲ್ಲೇ ಬಂದು ನ್ಯಾಯ ಕೊಟ್ಟ ನ್ಯಾಯಾಧೀಶರು. ನ್ಯಾಯಾಧೀಶ ಗಿರೀಶ್ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

14 ರಂದು ಧಾರವಾಡ ಸಿವಿಲ್ ಕೋರ್ಟ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನ ವೇಳೆ ಅಸಲು ದಾವೆ ಕೇಸೊಂದಕ್ಕೆ ಸಂಬಂಧಿಸಿದಂತೆ 89 ವರ್ಷ ವಯಸ್ಸಿನ ಕಕ್ಷಿದಾರ ಮಹಿಳೆ ಕೋರ್ಟ್

Live Cricket

error: Content is protected !!