ಬೆಂಗಳೂರು ನಂತರ ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿವೆ. ವಿ ವಿ ಗಳು, ಉನ್ನತ ಶಿಕ್ಷಣ ಕೇಂದ್ರಗಳು, ಬೃಹತ್ ಕೈಗಾರಿಕೆಗಳು ಅವಳಿ ನಗರಕ್ಕೆ ಶಕ್ತಿ ತುಂಬುತ್ತಿವೆ.
ಸಿದ್ದರಾಮಯ್ಯ ಸರ್ಕಾರ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಪುನರಾಭಿವೃದ್ಧಿಗೆ 23 ಕೋಟಿ ಮತ್ತು ಧಾರವಾಡದ ಸಿಟಿ ಬಸ್ ನಿಲ್ದಾಣದ ಮರುನಿರ್ಮಾಣಕ್ಕೆ 13 ಕೋಟಿ ಹಣವನ್ನು ವ್ಯಯಿಸಲು ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ. ಇದು ಅವಳಿ ನಗರದ ಜನರಿಗೆ ಉತ್ತಮ ಕೊಡುಗೆ ಕೊಟ್ಟಂತಾಗಿದೆ. ಹುಬ್ಬಳ್ಳಿ ಧಾರವಾಡದ ಬಸ್ ನಿಲ್ದಾಣಗಳು ಕೆಲವೇ ತಿಂಗಳಲ್ಲಿ ಹೈಟೆಕ್ ಸ್ಪರ್ಶ ಪಡೆಯಲಿವೆ.