ರಾಜ್ಯದ ಎರಡನೇ ರಾಜಕೀಯ ಶಕ್ತಿ ಕೇಂದ್ರ ಎನಿಸಿರುವ ಧಾರವಾಡ ಜಿಲ್ಲೆಯಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಈ ನಾಲ್ವರು ಶಾಸಕರ ಉನ್ನತ ಕಲಘಟಗಿ ಶಾಸಕ ಸಂತೋಷ ಲಾಡ್ ಸಚಿವರು. ಇನ್ನುಳಿದಂತೆ ಮೂವರು ಶಾಸಕರ ಮೇಲ್ಮನವಿ ನವಲಗುಂದ ಹಾಗೂ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕರು ನಿಗಮ ಮಂಡಳಿ ಮೇಲೆ ಕಣ್ಣಿಟ್ಟಿದ್ದಾರೆ.
ಲೋಕಸಭೆಗೂ ಮುನ್ನವೇ, ನಿಗಮ ಮಂಡಳಿಗೆ ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ ಮುಂದಾಗಿದೆ. ಧಾರವಾಡ ಜಿಲ್ಲೆಯಿಂದ ಹುಬ್ಬಳ್ಳಿ ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ನವಲಗುಂದ ಕ್ಷೇತ್ರದ ಶಾಸಕ ಎನ್ ಎಚ್ ಕೋನರೆಡ್ಡಿ, ನಿಗಮ ಮಂಡಳಿ ನೀಡುವಂತೆ ವರಿಷ್ಟರ ಮೇಲೆ ಒತ್ತಡ ಹೇರಿದ್ದಾರೆ. ಮೊನ್ನೆಯಷ್ಟೆ ಪ್ರಸಾದ ಅಬ್ಬಯ್ಯ ನವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಚಲವಾದಿ ಮಹಾಸಭಾ ಮುಖ್ಯಸ್ಥರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ. (ಲ್ಯಾಂಡ್ ಆರ್ಮಿ)
ಶಾಸಕ ಪ್ರಸಾದ ಅಬ್ಬಯ್ಯ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಲ್ಯಾಂಡ್ ಆರ್ಮಿ) ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯದಲ್ಲಿ ಐವರು ಶಾಸಕರು ಭೂಸೇನೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕೋಟ್ಯಾಂತರ ರೂಪಾಯಿ ಅನುದಾನ ಇಲ್ಲಿ ಹರಿದು ಬರುತ್ತಿದೆ, ಅಲ್ಪಸಂಖ್ಯಾತ ಹಾಗೂ ಸಮಾಜ ಇಲಾಖೆಯಿಂದ ಒಟ್ಟು 16 ಸಾವಿರದ 500 ಕೋಟಿ ಅನುದಾನ ಬರುವುದು ಬಾಕಿ ಇದೆ. ಮತ್ತೊಂದೆಡೆ ನವಲಗುಂದ ಶಾಸಕ ಎಚ್ ಕೋನರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು . ಇದೀಗ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ.
ಕಾಂಗ್ರೇಸ್ ಹೈಕಮಾಂಡ ಮಂಡಳಿ ಮೊದಲ ಹಂತದಲ್ಲಿ 35 ಮಂದಿಗೆ ನಿಗಮದ ಅಧ್ಯಕ್ಷ ಸ್ಥಾನ ಕೊಡುತ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ, ನಂತರ ಅಳೆದು ತೂಗಿ ನಿಗಮ ಮಂಡಳಿಗೆ ಶಾಸಕರನ್ನು ನೇಮಿಸಲಾಗಿದೆ. ನಿಗಮ ಮಂಡಳಿಗೆ ಭಾರಿ ಬೇಡಿಕೆ ಬಂದಿದ್ದು, ವಿನೋದ ಅಸೂಟಿ, ಅಲ್ತಾಫ ಹಳ್ಳೂರು, ಅನೀಲ್ ಪಾಟೀಲ್, ವಿಜಯ ಕುಲಕರ್ಣಿ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಫಾರುಖ್ ಅಬ್ಬುನವರ, ಇಸ್ಮಾಯಿಲ್ ತಮಟಗಾರ, ಬಾಬಾಜಾನ ಮುಧೋಳ, ರಜತ್ ಉಳ್ಳಾಗಡ್ಡಿ ಮಠ, ದೀಪಕ ಚಿಂಚೋರೆ, ನಾಗರಾಜ ಮುಲ್ಲಾ, ಶಾರುಖ್ ಮುಲ್ಲಾ, ಶಾರುಖ್, ನಾಗರಾಜ್ , ಮಹೇಂದ್ರ ಸಿಂಘಿ, ಮುತ್ತಣ್ಣ ಶಿವಳ್ಳಿ, ಮೊಹಮ್ಮದ್ ಗೌಸ್ ಪಿಂಜಾರ್, ಚಂದ್ರಶೇಖರ ಜುಟ್ಟಲ್, ತವನಪ್ಪ ಅಷ್ಟಗಿ, ಅಲಿ ಗೊರವನಕೊಳ್ಳ, ರವಿ ಮಾಳಗೇರ, ಆನಂದ ಜಾದವ, ಸುಬಾಸ ಧರ್ಮಾಯಿ, ರಾಬರ್ಟ್ ದದ್ದಾಪುರಿ, ವಸಂತ ಅರ್ಕಚಾರಿ, ಶರಣಪ್ಪ ಮತ್ತಿಗಟ್ಟಿ,. ಫೈರೋಜ್ ಪಠಾಣ, ತೌಸೀಫ ಲಕ್ಕುಂಡಿ, ದಾವಲಸಾಬ ನದಾಫ್, ಸಮದ್ ಗುಲ್ಬರ್ಗಾ, ಸೇರಿದಂತೆ ಅನೇಕ ನಿಗಮ ಮಂಡಳಿಗಳಲ್ಲಿ ಕಣ್ಣಿಟ್ಟಿದ್ದಾರೆ. ಆದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಶಾಸಕರಿಗೋ ಅಥವಾ ಕಾರ್ಯಕರ್ತರಿಗೆ ಚರ್ಚೆಯಾಗುತ್ತಿದೆಯೋ ಅನ್ನೋದರ ಬಗ್ಗೆ ಆರಂಭವಾಗಿದೆ.