Download Our App

Follow us

Home » ಹಬ್ಬಗಳು » ಕನ್ನಡ ರಾಜ್ಯೋತ್ಸವ, ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ 5 ಕನ್ನಡ ಹಾಡು ಕಡ್ಡಾಯ.

ಕನ್ನಡ ರಾಜ್ಯೋತ್ಸವ, ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ 5 ಕನ್ನಡ ಹಾಡು ಕಡ್ಡಾಯ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ರಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಗೊತ್ತುಪಡಿಸಿದ ಕನ್ನಡದ ಐದು ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ಕನ್ನಡಾಂಬೆಗೆ ಗೀತೆ ನಮನ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. # ಕರ್ನಾಟಕ # ನಾಮಕರಣದ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ.

ನವೆಂಬರ್ 1 ರಂದು ಹಾಡಬೇಕಾದ ಐದು ಹಾಡುಗಳನ್ನು ಸಂಸ್ಕೃತಿ ಇಲಾಖೆ ಗೊತ್ತುಪಡಿಸಿದೆ. ಹುಯಿಲಗೋಳ ನಾರಾಯಣರ ” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”, ಕುವೆಂಪು ಅವರ ” ಎಲ್ಲಾದರೂ ಇರು ಎಂತಾದರು ಇರು “, ದ. ರಾ. ಬೇಂದ್ರೆಯವರ ” ಒಂದೇ ಒಂದೇ ಕರ್ನಾಟಕ ಒಂದೇ “, ಸಿದ್ದಯ್ಯ ಪುರಾಣಿಕರ ” ಹೊತ್ತಿತೋ ಹೊತ್ತಿತು ಕನ್ನಡದ ದೀಪ “, ಚೆನ್ನವೀರ ಕಣವಿಯವರ ” ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಹಾಡುಗಳನ್ನು ಕಡ್ಡಾಯವಾಗಿ ಹಾಡುವಂತೆ ಆದೇಶ ಹೊರಡಿಸಲಾಗಿದೆ

Karnataka Files
Author: Karnataka Files

Leave a Comment

RELATED LATEST NEWS

error: Content is protected !!