ಧಾರವಾಡ : ದಸರಾ ಹಾಗೂ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡದ ಹೊಸ ಎಪಿಎಂಸಿ ಬಳಿಯ ಮಟ್ಟಿಪ್ಲಾಟ್ ನಲ್ಲಿ ನವರಾತ್ರಿ ಅಂಗವಾಗಿ ಮಹಿಳೆಯರು ಕೋಲಾಟ ಆಡಿ ಗಮನ ಸೆಳೆದರು. ಆದಿಶಕ್ತಿ ದೇವಿಯ ಅವತಾರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ಭಕ್ತಿ ಭಾವದಿಂದ ಭಕ್ತಿ ಗೀತೆಗಳನ್ನು ಹಾಡಿ, ದೇವಿಗೆ ನೈವೇದ್ಯ ಸಮರ್ಪಣೆ ಮಾಡಿದರು.
ನಗರದ ವಿವಿಧೆಡೆ ದಾಂಡಿಯಾ ಸಂಭ್ರಮ ಸಡಗರ ಜೋರಾಗಿಯೇ ಇದ್ದು, ಮಹಿಳೆಯರು ವಿಶಿಷ್ಟವಾಗಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸುವ ದೃಶ್ಯಗಳು ಕಂಡುಬಂತು.