ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಕುರಿತು ಇನ್ನೇರೆಡು ದಿನಗಳಲ್ಲಿ ತೀರ್ಮಾನ ಪ್ರಕಟಿಸುವದಾಗಿ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ ತಿಳಿಸಿದ್ದಾರೆ. ಅಂದುಕೊಂಡಂತೆ ನಡೆದರೆ ಡಿಸೆಂಬರ 4 ರಿಂದ 15 ರ ವರೆಗೆ ಚಳಿಗಾಲದ ಅಧಿವೇಶನ ನಡೆಯುವ ಲಕ್ಷಣಗಳಿದ್ದವು. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಇನ್ನು ಚರ್ಚೆ ಮಾಡಿಲ್ಲ ಎಂದ ಸ್ಪೀಕರ್ ಖಾದರ ಅವರು, ತಾವು ಹಾಗೂ ಪರಿಷತ ಸಭಾಪತಿಗಳು ಪರಿಶೀಲಿಸುತ್ತೆವೆ ಎಂದು ಹೇಳಿದ್ದಾರೆ.
