ಬಯೋಕಾನ ಎಂಬ ದೈತ್ಯ ಸಾಮ್ರಾಜ್ಯ ಕಟ್ಟಿರುವ ಕಿರಣಶಾ ಮಜುಮದಾರಗೆ ಧಾರವಾಡದ ಕೃಷಿ ವಿ ವಿ ಗೆ ಭೇಟಿ ನೀಡುವಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಆಹ್ವಾನಿಸಿದ್ದಾರೆ. ಜೈವಿಕ ತಂತ್ರಜ್ಞಾನದಲ್ಲಿ ವಿಶ್ವದಲ್ಲಿ ಹೆಸರು ಮಾಡಿರುವ ಕಿರಣಶಾ ಮಜುಮದಾರ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಮತ್ತು ಪದ್ಮಭೂಷನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೃಷಿ ವಿ ವಿ ಯ ಸಂಶೋಧನೆ ಮತ್ತು ಜೈವಿಕ ತಂತ್ರಜ್ಞಾನ ಸಂಬಂದಿತ ಜ್ಞಾನ ನೀಡಲು ಸಂತೋಷ ಲಾಡ್ ವಿನಂತಿಸಿದ್ದಾರೆ. ಪ್ರಮುಖ ಬಯೋಟೆಕ್ ಕಂಪನಿಯಾಗಿ, ಬಯೋಕಾನ್ ಬಯೋಟೆಕ್, ಉದ್ಯಮವನ್ನು ಒದಗಿಸುವಲ್ಲಿ ಮುನ್ನಡೆಸುವ ಸ್ಥಾನದಲ್ಲಿದೆ, ಸರಿಯಾದ ದೃಷ್ಟಿಕೋನ ಮತ್ತು ತರಬೇತಿಯೊಂದಿಗೆ ಉತ್ತಮ ವೃತ್ತಿಪರರು, ಭಾರತದಲ್ಲಿ ಬಯೋಟೆಕ್ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ತರಬೇತಿ ಕಾರ್ಯಕ್ರಮಗಳನ್ನು ತರಲು ಜಾಗತಿಕವಾಗಿ ಪ್ರಮುಖ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಯೋಗ ಮಾಡುವ ಮೂಲಕ, ಬಯೋಕಾನ್ ಅಕಾಡೆಮಿಯು ಉದ್ಯಮ ಮತ್ತು ಸಮುದಾಯವನ್ನು ಪರಿವರ್ತಿಸುವಲ್ಲಿ ದಾರಿ ಮಾಡಿಕೊಡುವ ಬಯೋಸೈನ್ಸ್‌ನಲ್ಲಿ ಸುಧಾರಿತ ಕಲಿಕೆಗಾಗಿ ಶ್ರೇಷ್ಠತೆಯ ಕೇಂದ್ರವಾಗಲು ಗುರಿಯನ್ನು ಹೊಂದಿದೆ. ವಿಶ್ವದಲ್ಲಿ ಹೆಸರು ಮಾಡಿರುವ ಕಿರಣ್ ಶಾ ಮಜುಮದಾರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ರ ಕೋರಿಕೆಯ ಮೇರೆಗೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಲು ಒಪ್ಪಿಕೊಂಡಿದ್ದಾರೆ.
