ಆಕೆಯ ಹೆಸರು ದೇವಿ ಶೀತಲ್, 16 ವರ್ಷದ ಬಾಲಕಿ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿರುವ ಕಾಶ್ಮೀರದ ದೇವಿ ಶೀತಲ್, ವಿಶ್ವ ಬೆರಗಾಗುವ ಅದ್ಭುತ ಸಾಧನೆ ಮಾಡಿದ್ದಾಳೆ. 4 ನೇ ಏಶಿಯನ್ ಪ್ಯಾರಾಗೇಮ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದೇವಿ ಶೀತಲ್, ಎರಡು ಚಿನ್ನದ ಪದಕ ಪಡೆದಿದ್ದಾಳೆ.
ಕಾಲಿನಿಂದ ಬಿಲ್ಲು ಹಿಡಿಯುವ ಈಕೆ ಭುಜಕ್ಕೆ ಆಸರೆಯಾಗಿ ಬಿಲ್ಲು ಹಿಡಿದು ಬಾಣ ಬಿಡುವ ರೋಮಾಂಚನಕಾರಿ ದೃಶ್ಯ ಜಗತ್ತನ್ನೇ ಬೆರಗುಗೊಳಿಸಿತು. ತೋಳುಗಳಿಲ್ಲದಿದ್ದರೆ ಏನಾಯ್ತು, ಬದುಕನ್ನು ಬದುಕುವ, ಬದುಕನ್ನು ಗೆಲ್ಲುವ ಛಲ ಇದ್ದರೆ, ಎಂತಹ ಸಾಧನೆಯನ್ನಾದರೂ ಮಾಡಬಹುದು ಎನ್ನುವದಕ್ಕೆ ಈಕೆ ಸಾಕ್ಷಿಯಾಗಿದ್ದಾಳೆ.