ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಭಿನ್ನಮತ ಇನ್ನೇನು ಶಮನವಾಯ್ತು ಅನ್ನುವಷ್ಟರಲ್ಲಿ, ಕಾಂಗ್ರೇಸ್ ನಾಯಕರ ದಿನಕ್ಕೊಂದು ಹೇಳಿಕೆಗಳು, ಹೈಕಮಾಂಡ ತಲೆ ನೋವಿಗೆ ಕಾರಣವಾಗಿವೆ. ಎರಡುವರೆ ವರ್ಷದ ಬಳಿಕ ನಾಯಕತ್ವ ಸಚಿವ ಸಂಪುಟ ಪುನಾರಚನೆ ಮತ್ತು ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗಳು, ಪಕ್ಷದಲ್ಲಿ ಬೇಗುದಿಗೆ ಕಾರಣವಾಗಿದೆ. ನಿನ್ನೆಯಷ್ಟೇ ರಾಜ್ಯ ಕಾಂಗ್ರೇಸ್ ಉಸ್ತುವಾರಿ ಸುರ್ಜೆವಾಲಾ ಹಾಗೂ ಕೆ ಸಿ ವೇಣುಗೋಪಾಲ, ಯಾರು ಸಹ ಪಕ್ಷಕ್ಕೆ ಡ್ಯಾಮೇಜ್ ಆಗುವಂತ ಹೇಳಿಕೆ ನೀಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರಣೆಗೆ ಸಂಬಧಿಸಿದಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯನಗರದಲ್ಲಿ ಹೇಳಿಕೆ ನೀಡಿದ್ದು, ನಾನೇ 5 ವರ್ಷ ಪೂರ್ಣ ಮುಖ್ಯಮಂತ್ರಿಯಾಗಿರ್ತೀನಿ ಎಂದಿದ್ದಾರೆ. ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಸಂದೇಶ ರವಾನಿಸಿದ್ದಾರೆ.