ಗಣಪತಿ ವಿಷಯಕ್ಕೆ ಸಂಬಂಧಿಸಿದಂತೆ ಸಾಣೆಹಳ್ಳಿ ಶ್ರೀಗಳು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ಗಣಪತಿ ಕಾಲ್ಪನಿಕ ದೇವರು, ಗಣಪತಿ ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರು ಎಂದು ಹೇಳಿರುವ ಸಾಣೆಹಳ್ಳಿ ಶ್ರೀಗಳಿಗೆ ವಿಶ್ವೇಶ್ವರ ಭಟ್ (ಎಕ್ಸ್ ) ಟ್ವಿಟರ್ ನಲ್ಲಿ ಟಾಂಗ್ ನೀಡಿದ್ದಾರೆ.
ಸ್ವಾಮೀಜಿಗಳಾದವರು ಇಂತಹ ಉಪಾಧ್ಯಾಪಿ ಮತ್ತು ಅನರ್ಥಕಾರಿ ಹೇಳಿಕೆ ನೀಡುವದನ್ನು ನಿಲ್ಲಿಸಬೇಕು. ಜನರ ನಂಬಿಕೆಗಳಿಗೆ ಧಕ್ಕೆ ತರುವ ಹುಡುಗಾಟಿಕೆ ಶೋಭೆ ತರುವದಿಲ್ಲ. ಸಾಣೆಹಳ್ಳಿ ಸ್ವಾಮೀಜಿ ನಾಟಕ ಮಾಡಿಕೊಂಡು ಅರಾಮಿರಲಿ. ದೇವರ ತಂಟೆ ಬೇಡ. ಎಂದು ಟ್ವಿಟ್ ಮಾಡಿದ್ದಾರೆ.
ವಿಶ್ವೇಶ್ವರ ಭಟ್ ಹೇಳಿಕೆಗೆ ತಿರುಗೇಟು ನೀಡಿರುವ ಭಕ್ತರು, ಸ್ವಾಮೀಜಿ ಈ ಮಾತನ್ನು ಲಿಂಗಾಯತರಿಗೆ ಹೇಳಿದ್ದಾರೆ. ಬೇರೆಯವರ ಪ್ರತಿಕ್ರಿಯೆ ಅನವಶ್ಯಕ ಎಂದು ಭಟ್ಟರ ಕಾಲೆಳೆದಿದ್ದಾರೆ.