ಗಣಪತಿ ಪೂಜೆಗೆ ಸಂಬಂಧಿಸಿದಂತೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸ್ಪೋಟಕ ವಿಚಾರವೊಂದನ್ನು ಮಂಡಿಸಿದ್ದಾರೆ. ಸಾಣೆಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಾಣೆಹಳ್ಳಿ ಶ್ರೀಗಳು, ಯಾವದೇ ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಥವಾ ಮನೆಯಲ್ಲಿ ಗಣಪತಿ ಪ್ರಾರ್ಥನೆ ಮಾಡುವದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ.
ಗಣೇಶನನ್ನು ಸ್ತುತಿಸುವದು ಮೌಢ್ಯದ ಆಚರಣೆಯಾಗಿದೆ ಎಂದ ಅವರು ಗಣಪತಿ ಕಾಲ್ಪನಿಕ ದೇವರು ಎಂದು ಹೇಳಿದ್ದಾರೆ. ಗಣಪತಿ, ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರು. ಮನೆಗಳಲ್ಲಿ ಅಥವಾ ಯಾವದೇ ಸಮಾರಂಭ ಆರಂಭಕ್ಕೂ ಗಣೇಶ ಪ್ರಾರ್ಥನೆ ಮಾಡುವದು ಹಲವರ ನಂಬಿಕೆಯಾಗಿದೆ ಎಂದು ಶ್ರೀಗಳು ಹೇಳಿದ್ದಾರೆ. ಗಣೇಶ ಪ್ರಾರ್ಥನೆ ಬದಲಾಗಿ ವಚನಗಳನ್ನೇ ಪ್ರಾರ್ಥನೆಯಂತೆ ಪಠಿಸಬೇಕು ಎಂದು ಸಲಹೆ ನೀಡಿದರು.