ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 22 ನೇ ಕಲ್ಯಾಣ ಪರ್ವದಲ್ಲಿ ಬಸವಧರ್ಮ ಪೀಠ, ಕೂಡಲ ಸಂಗಮದ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಡಾ.ಗಂಗಾ ಮಾತಾಜಿ, ಡಾ.ಲತಾ.ಎಸ್ ಮುಳ್ಳೂರ ಅವರಿಗೆ *ಸೇವಾ ಧುರಂಧರ*” *ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರದ ಏಕೈಕ ಶಿಕ್ಷಕಿಯರ ಸಂಘವಾದ ಸಾವಿತ್ರಿಬಾಯಿ ಫುಲೆ ರಾಷ್ಟೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿಯ ಸಂಸ್ಥಾಪಕ ಅಧ್ಯಕ್ಷರಾದ ಲತಾ ಮುಳ್ಳೂರ, ಈ. ಮುಂಚೆ ರಾಜ್ಯ ಮಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಸಂಘಟನೆ ಕಟ್ಟಿದ್ದರು. ರಾಜ್ಯವ್ಯಾಪಿ ಶಿಕ್ಷಕಿಯರ ಸಂಘಟನೆ ಮಾಡಿದ ಲತಾ ಅವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ರಾಷ್ಟ್ರೀಯ ಅಧ್ಯಕ್ಷರು, ಹಾಗೂ ರಾಜ್ಯದ ಏಕೈಕ ಶಿಕ್ಷಕಿಯರ ಸಂಘ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ದ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಲತಾ ಮುಳ್ಳೂರ, ಶಿಕ್ಷಕಿಯರ ದ್ವನಿಯಾಗಿದ್ದಾರೆ.