ಧಾರವಾಡದಲ್ಲಿ ಪ್ರತ್ರೈಕ ಮಹಾನಗರ ಪಾಲಿಕೆ ರಚಿಸಬೇಕೆಂಬ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ಮಾಡುವಂತೆ ಪಾಲಿಕೆ ಸದಸ್ಯರು ಹಾಗೂ ಹೋರಾಟಗಾರರು ಮಾಡಿದ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ಪಂಧಿಸಿದ್ದಾರೆ.
ಪ್ರತ್ತೈಕ ಪಾಲಿಕೆ ರಚನೆ ಕುರಿತಂತೆ ಧಾಖಲೆಗಳನ್ನು ಪರಿಶೀಲಿಸಿ, ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ರಚನೆ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಲಾಡ್ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ. ಇದರಿಂದಾಗಿ ಪ್ರತ್ತೈಕ ಪಾಲಿಕೆ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದ್ದು, ಹೋರಾಟಗಾರರು ಸಚಿವ ಲಾಡ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.