ಗಡಿ ಜಿಲ್ಲೆಯಾದ ಬೀದರನಲ್ಲಿ ಜಿಲ್ಲಾ ಪೊಲೀಸರು ದೋ ನಂಬರ ದಂದೆಕೋರರ ಹುಟ್ಟಡಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ, ಅಂದರಬಾಹರ ಆಟ ಆಡುವವರನ್ನು ಹೆಡಮುರಿಗೆ ಕಟ್ಟುತ್ತಿದ್ದಾರೆ. ಬೀದರ ಜಿಲ್ಲೆಯ ಪೊಲೀಸರಿಂದ ಕಳೆದ ಒಂದು ವಾರದಲ್ಲಿ ಒಟ್ಟು 13 ಇಸ್ಟಿಟ್ ಮತ್ತು ಮಟಕಾ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿ 5 ಲಕ್ಷಕ್ಕೂ ಅಧಿಕ ನಗದು ಹಣ, ಮೊಬೈಲ್ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಧನ್ನೂರು, ಕಟಕ ಚಿಂಚೋಳ್ಳಿ, ಬೀದರ ಗ್ರಾಮೀಣ, ಮನ್ನಾ ಏಖಳಿ, ಬಸವಕಲ್ಯಾಣ, ಹುಮ್ನಾಬಾದ್, ಬಾಲ್ಕಿ, ಹಳ್ಳಿಕೇಡ್ ಬಿ, ಬೇಮಳಖೇಡಾ, ಕಮಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ.