Download Our App

Follow us

Home » ಶಿಕ್ಷಣ » ಕೆ ಇ ಎ ಪರೀಕ್ಷೆಯಲ್ಲಿ ಆಕ್ರಮ, ಧಾರವಾಡದಲ್ಲಿಯೂ ಶೋಧ ಕಾರ್ಯ.

ಕೆ ಇ ಎ ಪರೀಕ್ಷೆಯಲ್ಲಿ ಆಕ್ರಮ, ಧಾರವಾಡದಲ್ಲಿಯೂ ಶೋಧ ಕಾರ್ಯ.

ಶೈಕ್ಷಣಿಕ ಕಾಶಿ ಎಂದು ಹೆಸರಾಗಿರುವ ಧಾರವಾಡ ಹೆಸರಿಗೆ ತಕ್ಕ ಹಾಗೆ ಉಳಿದಿಲ್ಲ. ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿರುವ ಕೋಚಿಂಗ್ ಸೆಂಟರಗಳು ಹಣ ಮಾಡುವದನ್ನೇ ದಂದೆ ಮಾಡಿಕೊಂಡಿವೆ. ಧಾರವಾಡದಲ್ಲಿ ಪ್ರತಿ ವರ್ಷ 8 ರಿಂದ 10 ಕೋಚಿಂಗ್ ಸೆಂಟರಗಳು ಹೊಸದಾಗಿ ಪ್ರಾರಂಭವಾಗ್ತಿವೆ. ಶೀಘ್ರ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೋಚಿಂಗ್ ಸೆಂಟರಗಳು ಆಕ್ರಮಕ್ಕೆ ಎಡೆ ಮಾಡಿಕೊಡುತ್ತಿವೆ. IPS ಹಾಗೂ PSI ಸೇರಿದಂತೆ ಸರ್ಕಾರಿ ಅಧಿಕಾರಿಗಳು ಧಾರವಾಡದಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿ, ಕೋಚಿಂಗ್ ಕೇಂದ್ರಗಳನ್ನು ತೆರೆದು, ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡುತ್ತಿದ್ದಾರೆ. 

ಧಾರವಾಡದಲ್ಲಿ KAS/IAS/PSI /PDO ತರಬೇತಿ ಹೆಸರಲ್ಲಿ ಕೋಚಿಂಗ್ ಸೆಂಟರ್ ಗಳು ನಡೆಯುತ್ತಿವೆ. ಕಳೆದ ವರ್ಷ ಕಲಬುರಗಿಯಲ್ಲಿ ನಡೆದ ಪಿ ಎಸ್ ಐ ಪರೀಕ್ಷೆ ಹಗರಣ ಹಾಗೂ ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ FDA ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆದವರನ್ನು ಪೊಲೀಸರು ಬೆಂಡತ್ತಿದ್ದು, ಅದರ ವಾಸನೆ ಧಾರವಾಡದವರೆಗೂ ಹರಡಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದಷ್ಟೆ ಧಾರವಾಡಕ್ಕೆ ಬಂದ  ತನಿಖಾ ತಂಡ, ಆಕ್ರಮದಲ್ಲಿ ತೊಡಗಿರುವ ಕೋಚಿಂಗ್ ಸೆಂಟರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಧಾರವಾಡದಲ್ಲಿ ಕೋಚಿಂಗ್ ಹೆಸರಲ್ಲಿ ಶಿಕ್ಷಣ ಗುಣಮಟ್ಟ ಕುಸಿದಿದ್ದು, ಇವೆ ಕೋಚಿಂಗ್ ಸೆಂಟರಗಳು ಆಕ್ರಮಕ್ಕೆ ರಹದಾರಿ ಮಾಡಿಕೊಡುತ್ತಿವೆ ಎಂದು ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!