ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಸರ್ಕಾರದಲ್ಲಿ ನಡೆದ PSI ಪರೀಕ್ಷಾ ಹಗರಣ ದೊಡ್ಡ ಸುದ್ದಿ ಮಾಡಿತ್ತು. ಪ್ರಕರಣವನ್ನು ಸಿ ಐ ಡಿ ಗೆ ಒಪ್ಪಿಸಲಾಗಿತ್ತು. ಆಳವಾದ ತನಿಖೆ ನಡೆಸಿದ್ದ ಸಿ ಐ ಡಿ ವಿಧ್ಯಾ ಮತ್ತು ಆರ್ ಡಿ ಪಾಟೀಲನನ್ನು ಬಂಧಿಸಿ, ಪ್ರಕರಣ ಭೇಧಿಸಿತ್ತು. ಬಿಜೆಪಿ ಸರ್ಕಾರದ ಅಂದು ವಿರೋದ ಪಕ್ಷದಲ್ಲಿದ್ದ ಕಾಂಗ್ರೇಸ್ ಮುಗಿಬಿದ್ದಿತ್ತು.
ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ FDA ಪರೀಕ್ಷೆಯಲ್ಲಿಯೂ ಬ್ಲೂಟುತ್ ಬಳಸಿ ಆಕ್ರಮ ನಡೆಸಿದ್ದು ಬಯಲಿಗೆ ಬಂದಿದೆ. ಈ ಆಕ್ರಮದಲ್ಲಿಯೂ PSI ಪರೀಕ್ಷೆ ಆಕ್ರಮದ ಪ್ರಮುಖ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೈವಾಡವಿದೆ ಎಂದು ಗೊತ್ತಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಿಂಗ್ ಪಿನ್ ಆರ್ ಡಿ ಪಾಟೀಲ ಪರಾರಿಯಾಗಿದ್ದಾನೆ. ಆರ್ ಡಿ ಪಾಟೀಲ, ಮಹಾರಾಷ್ಟ್ರದಲ್ಲಿ ಇದ್ದಾನೆ ಅನ್ನೋ ಮಾಹಿತಿ ಇದೆ. ಆತನನ್ನು ಶೀಘ್ರದಲ್ಲಿ ಬಂಧಿಸುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.
