ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದ ಗಿರಣಿಯೊಂದರಲ್ಲಿ ಅಂದರ ಬಾಹರ ಆಡುತ್ತಿದ್ದ 25 ಜನರನ್ನು ಅಣ್ಣಿಗೇರಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇಲೆ ಇಸ್ಪೇಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಗಿರಣಿ ಸುತ್ತುವರೆದು ಮೂರು ವಾಹನಗಳಲ್ಲಿ ಜೂಜುಕೋರರನ್ನು ಕರೆದೋಯ್ದಿದ್ದಾರೆ. ಅಣ್ಣಿಗೇರಿ ಹಾಗು ಭದ್ರಾಪುರ ಮೂಲದ ಪ್ರತಿಷ್ಟಿತ ಮನೆತನದವರು ಅಂದರ ಬಾಹರ ಆಡುತ್ತಿದ್ದರೆಂದು ಹೇಳಲಾಗಿದೆ. ದಾಳಿ ವೇಳೆ 8 ಲಕ್ಷಕ್ಕೂ ಹೆಚ್ಚು ಹಣ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಕ್ರೈಮ್ ಡ್ಯೂಟಿ ಮಾಡುವ ಪೊಲೀಸ ಪೇದೆಯಾದ ಪವನ ಮತ್ತು ತಂಡ ದಾಳಿ ಮಾಡಿದೆ ಎನ್ನಲಾಗಿದೆ.
