ರಾಜ್ಯ ರಸ್ತೆ ಸಾರಿಗೆ ನಿಗಮ ಪಲ್ಲಕ್ಕಿ ಹೆಸರಿನ ಐಷಾರಾಮಿ ಬಸ್ ಗಳನ್ನು ರಸ್ತೆಗಿಳಿಸಿದ್ದು, ಪಲ್ಲಕ್ಕಿ ಪ್ರಯಾಣ ಬೆಳೆಸಿದೆ. ಬೆಳಗಾವಿಯಿಂದ ಬೆಂಗಳೂರು ನಡುವೆ ಪಲ್ಲಕ್ಕಿ ಬಸ್ ಸಂಚಾರ ಆರಂಭಿಸಿದೆ. ಬೆಳಗಾವಿಯಿಂದ ಧಾರವಾಡ, ಹುಬ್ಬಳ್ಳಿ ಮಾರ್ಗವಾಗಿ ಪಲ್ಲಕ್ಕಿ ಬಸ್ ಸಂಚಾರ ಆರಂಭಿಸಿದ್ದು, ಮತ್ತಷ್ಟು ವೋಲ್ವೋ ಬಸ್ ಗಳನ್ನು ಈ ಮಾರ್ಗದಲ್ಲಿ ಓಡಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
