ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಇಂಟರ್-ಅಪಾರ್ಟ್‌ಮೆಂಟ್ ಸ್ಪೋರ್ಟ್ಸ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಆವೃತ್ತಿ ಆನ್ ಆಗಿದೆ! ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಅಂತರ ಅಪಾರ್ಟಮೆಂಟ್ ಕ್ರೀಡೆಯಲ್ಲಿ 600 ಕ್ಕೂ ಹೆಚ್ಚು ಕ್ರೀಡಾಪಟುಗಳು ಹೆಸರು ನೊಂದಾಯಿಸಿಕೊಂಡಿದ್ದು, ಬೆಂಗಳೂರಿನ 90 ಕ್ಕೂ ಹೆಚ್ಚು ಅಪಾರ್ಟ್ಮೆಂಟಗಳು ಕ್ರೀಡೋತ್ಸವದಲ್ಲಿ ಭಾಗವಹಿಸಲಿವೆ.
ಇದೇ ದಿನಾಂಕ 25 ಮತ್ತು 25 ರಂದು ಕ್ರೀಡೋತ್ಸವ ನಡೆಯಲಿದೆ. ಬ್ಯಾಟರಾಯನಪುರ, ಸಹಕಾರ ನಗರ, ವಿದ್ಯಾರಣ್ಯಪುರ ಒಳಾಂಗಣ ಕ್ರೀಡಾಂಗಣ, ಮತ್ತು ಮೈದಾನದಲ್ಲಿ ಕ್ರಿಕೇಟ್, ಬ್ಯಾಡ್ಮಿಂಟನ್, ಕೇರಂ, ಬಾಸ್ಕೆಟ್ ಬಾಲ್, ಟೇಬಲ್ ಟೆನಿಸ್ ನಂತಹ ಕ್ರೀಡೆಗಳು ನಡೆಯುತ್ತಿವೆ.
