ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ವಿಮಾನದಲ್ಲಿ ಪ್ರಯಾಣ ಕೈಗೊಂಡರು. ಬೆಂಗಳೂರಿನ ಎಚ್ ಎ ಎಲ್ ಗೆ ಭೇಟಿ ನೀಡಿದ ಅವರು ತೇಜಸ್ ಉತ್ಪಾದನಾ ಘಟಕದ ಪರಿಶೀಲನೆ ನಡೆಸಿದರು. ತೇಜಸ್ ಒಂದೇ ಆಸನದ ಯುದ್ಧ ವಿಮಾನವಾಗಿದ್ದು, ತರಬೇತಿ ಕೊಡಲೆಂದು ನಿರ್ಮಿಸಿರುವ ಎರಡು ಆಸನದ ವಿಮಾನದಲ್ಲಿ ಹಾರಾಟ ನಡೆಸಿ, ಸಂತಸ ವ್ಯಕ್ತಪಡಿಸಿದರು.
