ಕಡೆಗೂ ಕೋಟಿ ಕೋಟಿ ಜನರ ಪ್ರಾರ್ಥನೆ ಈಡೇರಿದೆ. ಉತ್ತರಕಾಶಿಯ ಸಿಲ್ಕ್ಯಾರ ಸುರಂಗದೊಳಗೆ ಸಿಕ್ಕಿ ಹಾಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿದ್ದಾರೆ. ಒಬ್ಬೊಬ್ಬರನ್ನಾಗಿ ಕಾರ್ಮಿಕರನ್ನು ಕೆಲವೇ ಹೊತ್ತಿನಲ್ಲಿ ಹೊರಗೆ ತರಲಾಗುತ್ತಿದೆ. ಕಾರ್ಮಿಕರು ಒಬೊಬ್ಬರಾಗಿ ಹೊರಬರುವ ಪ್ರಕ್ರಿಯೆ ಆರಂಭವಾಗಿದ್ದು, , 58 ಮೀಟರ ಉದ್ದದ ಮಾರ್ಗವನ್ನು ಕೊರೆದು, ಒಳಗೆ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರನ್ನು ಕರೆತರಲಾಗುತ್ತಿದೆ.
ಸುರಂಗ ಮಾರ್ಗ ಕುಸಿದ ಪರಿಣಾಮ ಕೆಲಸದ ಮೇಲಿದ್ದ 41 ಕಾರ್ಮಿಕರು ಹೊರಗೆ ಬಾರದೆ ಸುರಂಗದಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರು. ಅತ್ಯಾಧುನಿಕ ಯಂತ್ರೋಪಕರಣ ಮತ್ತು ತಂತ್ರಜ್ಞರ ಸಹಾಯದಿಂದ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ.
ಸ್ಥಳದಲ್ಲಿ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಆಂಬುಲೆನ್ಸ್, ಏರ್ ಅಂಬುಲೆನ್ಸ್ ಸೇರಿದಂತೆ ಹೆಲಿಕಾಪ್ಟರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ನಿಗಾ ವಹಿಸಿದ್ದಾರೆ.
ಕಾರ್ಮಿಕರನ್ನು ಹೊರಗೆ ತರುವಲ್ಲಿ ಕಳೆದ 17 ದಿನಗಳಿಂದ ನಡೆದಿದ್ದ ಕಾರ್ಯಾಚರಣೆ ಕಡೆಗೂ ಯಶಸ್ಸು ಕಂಡಿದೆ. rat hole mining ತಂತ್ರಜ್ಞಾನ ಅಳವಡಿಸಿ, ಕಾರ್ಮಿಕರಿದ್ದ ಸ್ಥಳ ತಲುಪಲಾಗಿತ್ತು. ಆರ್ನಲ್ಡ್ ಡಿಕ್ಸ್ ಮತ್ತು ಕ್ರಿಸ್ ಕೂಪರ ಎಂಬ ಇಬ್ಬರು ಅಂತರಾಷ್ಟ್ರೀಯ ತಂತ್ರಜ್ಞರು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.
