ಉತ್ತರಕಾಶಿಯ ಸಿಲ್ಕ್ಯಾರ ಸುರಂಗದೊಳಗೆ ಸಿಕ್ಕಿ ಹಾಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಎನ್ ಡಿ ಆರ್ ಎಫ್ ತಂಡದ ಜೊತೆ ಇಲಿ ಬಿಲ್ ಪರಿಣಿತರ ತಂಡದ ಸಾಹಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಕೀಲ್ ಖಾನ್ ಮತ್ತು ಮುನ್ನಾ ಖುರೇಷಿ ನೇತೃತ್ವದಲ್ಲಿ ದೆಹಲಿಯಿಂದ ಇಲಿ ಗಣಿಗಾರಿಕೆಯ 11 ಪುರುಷರ ತಂಡ ಆಗಮಿಸಿ ರಕ್ಷಣೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, 2014 ರಲ್ಲಿ ಇಲಿ ಬಿಲ್ ರಂದ್ರಗಣಿಗಾರಿಕೆಯನ್ನು ( Rat Hole Mining ) ನಿಷೇಧಿಸಿತ್ತು. ಮತ್ತು ಇದು ಅವೈಜ್ಞಾನಿಕ ಎಂದು ಹೇಳಿತ್ತು. ಆದರೆ, ಅವೈಜ್ಞಾನಿಕ ಎಂದು ಹೇಳಲಾಗಿದ್ದ ಇಲಿ ಬಿಲ್ ತಂತ್ರಜ್ಞಾನ 41 ಜನರ ಜೀವ ಉಳಿಸಿದೆ.
ಇಲಿ ಬಿಲ್ ರಂದ್ರಗಣಿಗಾರಿಕೆ ತಂಡ, ಶಿಲಾಖಂಡರಾಶಿಗಳ ರಾಶಿಗೆ ಕೈಯಾರೆ ಕೊಳವೆಗಳನ್ನು ಕೊರೆದು ಸಾಹಸ ಮೆರೆದಿದೆ. ಈ ತಂಡವು ಅತ್ಯಂತ ಕಷ್ಟಕರವಾದ ಕೆಲಸವನ್ನು ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲಿ ಸಾಧಿಸಿದೆ. ಈ ಕಾರ್ಮಿಕ ಯೋಧರ ಅಸಾಧಾರಣ ಪ್ರಯತ್ನಗಳು ಮತ್ತು ಧೈರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ ಮತ್ತು ಅವರಿಗೆ ಸರಿಯಾದ ಗೌರವವನ್ನು ನೀಡಬೇಕೆಂದು, ನೆಟ್ಟಿಗರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕಷ್ಟಕರವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ NDRF ಸೇರಿದಂತೆ ಎಲ್ಲಾ ಏಜೆನ್ಸಿಗಳು ಮತ್ತು ಪರಿಹಾರ ಕಾರ್ಯಕರ್ತರ ಶ್ರಮ ಫಲ ನೀಡಿದ್ದು, ಐತಿಹಾಸಿಕ ಕಾರ್ಯಾಚರಣೆಗೆ ಕೋಟ್ಯಾಂತರ ಭಾರತೀಯರು ಅಭಿನಂದಿಸಿದ್ದಾರೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)