RTI ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ PDO ನಾಗರಾಜ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿಷ ಕುಡಿಯೋದಕ್ಕೂ ಮುನ್ನ ವಿಡಿಯೋ ಮಾಡಿರುವ ನಾಗರಾಜ, ಅಲ್ಲಿ ತಮ್ಮ ಗೋಳನ್ನು ತೋಡಿಕೊಂಡಿದ್ದಾನೆ.
ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬ ಆರ್ ಟಿ ಐ ಕಾರ್ಯಕರ್ತ ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ನಾಗರಾಜ ಆರೋಪಿಸಿದ್ದು, ವಿಷ ಕುಡಿದ ನಾಗರಾಜನನ್ನು ಜಿಲ್ಲಾಸ್ಪತ್ರೆಗೆ ಧಾಖಲಿಸಲಾಗಿದೆ. ಮಾಹಿತಿ ನೆಪದಲ್ಲಿ ಬಹಳಷ್ಟು ಅಧಿಕಾರಿಗಳಿಗೆ ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬಾತ ಕಿರುಕುಳ ನೀಡುತ್ತಾನೆ ಎಂದು ಆರೋಪಿಸಲಾಗಿದ್ದು, ಕಾನೂನು ಬಾಹಿರ ಕೆಲಸ ಮಾಡಿಕೊಡಲು ಒತ್ತಾಯಿಸುತ್ತಾನೆ ಎಂದು ನಾಗರಾಜ ಆರೋಪಿಸಿದ್ದಾರೆ. ಅದಕ್ಕಾಗಿ ನನ್ನ ಜೀವನವನ್ನು ಇಲ್ಲಿಯೇ ಮುಗಿಸುತ್ತಿದ್ದೇನೆ ದಯಮಾಡಿ ನನ್ನನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಧಾರವಾಡ ಜಿಲ್ಲೆಯಲ್ಲಿ RTI ಕಾರ್ಯಕರ್ತರ ಹಾವಳಿಗೆ ಅಧಿಕಾರಿಗಳು ಬೇಸತ್ತು ಹೋಗಿದ್ದು, ನಕಲಿ RTI ಕಾರ್ಯಕರ್ತರ ಹೆಡಮುರಿಗೆ ಕಟ್ಟಬೇಕಿದೆ. ಸಧ್ಯ ನಾಗರಾಜ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)