ಇಲ್ಲಿಯವರಿಗೆ ಡೀಸೆಲ್ ಇಂಧನದಿಂದ ಚಲಿಸುತ್ತಿದ್ದ ಸಿದ್ಧಗಂಗಾ ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12725/26) ನಿನ್ನೆಯಿಂದ ವಿದ್ಯುತ್ ಚಾಲಿತ ರೈಲಾಗಿ ಮಾರ್ಪಟ್ಟಿದೆ. ನಿನ್ನೇ ಬೆಂಗಳೂರಿನಿಂದ ಧಾರವಾಡಕ್ಕೆ ತನ್ನ ಮೊದಲ ಪಯಣ ಆರಂಭಿಸಿದ್ದ ಈ ರೈಲು ಇಂದು ಧಾರವಾಡದಿಂದ ಬೆಂಗಳೂರಿಗೆ ಮರಳಿತು. ಇನ್ಮೇಲೆ ಈ ಇಂಟರಸಿಟಿ ರೈಲು ಸತತವಾಗಿ ವಿದ್ಯುತ್ ಚಾಲಿತ ಇಂಜಿನ್ನೊಂದಿಗೆ ಪ್ರಯಾಣ ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ತಿಳಿಸಿದ್ದಾರೆ.