ನಾಸ್ತಿಕ ಮನೋಭಾವದ ಸಚಿವ ಸತೀಶ ಜಾರಕಿಹೊಳಿಯವರ ಕುಲ ಗೋತ್ರ ಪ್ರಶ್ನಿಸಿದ ಅರ್ಚಕ ಇಕ್ಕಟ್ಟಿನಲ್ಲಿ ಸಿಲುಕಿದ ಘಟನೆ ಶಿರಸಿಯ ಹೆಗ್ಗಾರದಲ್ಲಿ ನಡೆದಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಕಾಲು ಸಂಕದ ಉದ್ಘಾಟನೆ ವೇಳೆ ಅರ್ಚಕನೊಬ್ಬ ಜಾರಕಿಹೊಳಿಯವರ ಹತ್ತಿರ ಬಂದು ಕುಲ ಗೋತ್ರ ಕೇಳಿದ್ದಾನೆ.
ಕುಲ ಗೋತ್ರ ಕೇಳಿದ ಅರ್ಚಕನಿಗೆ ಮಾನವತಾವಾದದ ಪಾಠ ಮಾಡಿದ ಜಾರಕಿಹೊಳಿ, ನನ್ನ ಕುಲ ಮಾನವ ಕುಲ, ನನ್ನ ಜಾತಿ ಮಾನವ ಜಾತಿ, ನನ್ನ ಧರ್ಮ ಮಾನವ ಧರ್ಮ ಎಂದು ಹೇಳಿದ್ದಾರೆ.
ಶಿವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಾರದಲ್ಲಿ 52 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಲು ಸಂಕ ಉದ್ಘಾಟನೆ ವೇಳೆ ಸಚಿವ ಜಾರಕಿಹೊಳಿ ಮಾನವತಾವಾದದ ಪಾಠ ಮಾಡಿದ್ದಾರೆ.