ಪ್ರಚೋದನೆ, ದ್ವೇಷ ಮತ್ತು ತಪ್ಪು ಸುದ್ದಿಗಳನ್ನು ಬಿತ್ತರಿಸುತ್ತಿದ್ದ 9 ಯೂಟ್ಯೂಬ್ ಚಾನೆಲ್ ಗಳನ್ನು ಪ್ರೆಸ್ ಇನ್ಫಾರ್ಮೆಶನ್ ಬ್ಯುರೋ ಭೇದಿಸಿದೆ. ಈ ಚಾನೆಲ್ ಗಳು ಸುಳ್ಳು ಸುದ್ದಿಗಳನ್ನು ಹರಡಿ, ಸಾರ್ವಜನಿಕ ನೆಮ್ಮದಿ ಕೆಡಿಸುವ ಹಾಗೂ ಪ್ರಚೋದಿಸುವ ಸುದ್ದಿಗಳನ್ನು ಹರಡುತ್ತಿದ್ದವು ಎಂದು ಆರೋಪಿಸಲಾಗಿದೆ. ತಕ್ಷಣದಿಂದ 9 ಚಾನೆಲ್ ಗಳನ್ನು ಪ್ರೆಸ್ ಇನ್ಫಾರ್ಮೆಶನ್ ಬ್ಯುರೋ ನಿಷೇಧಿಸಿದೆ. ನಿಷೇಧ ಹೆರಲಾಗಿರುವ ಯೂಟ್ಯೂಬ್ ಚಾನೆಲ್ ಗಳು ಇಂತಿವೆ.
1. ಭಾರತ್ ಏಕ್ತಾ ನ್ಯೂಸ್
2. ಬಜರಂಗ ಶಿಕ್ಷಣ
3. ಬಿಜೆ ನ್ಯೂಸ್
4. ಸಂಸಾನಿ ಲೈವ್ ಟಿವಿ
5. ಜಿವಿಟಿ ನ್ಯೂಸ್
6. ದೈನಂದಿನ ಅಧ್ಯಯನ
7. ಅಬ್ ಬೊಲೆಗಾ ಭಾರತ್
8. ಸರ್ಕಾರಿ ಯೋಜನೆ ಅಧಿಕೃತ
9. ಆಪ್ಕೆ ಗುರೂಜಿ