ಅಯ್ಯಪ್ಪ ಮಾಲಾಧಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈರುತ್ಯ ರೇಲ್ವೆ ಇಲಾಖೆ ಇಂದಿನಿಂದ ಶ್ರೀ ಕ್ಷೇತ್ರ ಶಬರಿಮಲೈಗೆ ರೈಲು ಸೇವೆ ಆರಂಭಿಸಿತು. ಹುಬ್ಬಳ್ಳಿ ರೈಲು ನಿಲ್ದಾಣದಿಂದ ವಿಶೇಷ ರೈಲು ಸಂಚಾರ ಇಂದಿನಿಂದ ಆರಂಭವಾದ ನಿಮಿತ್ತ ಅಯ್ಯಪ್ಪ ಮಾಲಾಧಾರಿಗಳು ರೈಲಿಗೆ ವಿಶೇಷ ಪೂಜೆ ಸಲ್ಲಿಸಿದರು.
ರೈಲಿಗೆ ಕಬ್ಬು, ಬಾಳೆ ಗಿಡ, ಹೂವು ಕಟ್ಟಿ ವಿಶೇಷ ರೀತಿಯಲ್ಲಿ ಅಲಂಕರಿಸಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರೈಲಿಗೆ ಪೂಜೆ ಸಲ್ಲಿಸಿದರು. ಹುಬ್ಬಳ್ಳಿಯಿಂದ ಕೊಟ್ಟಾಯಂವರೆಗೆ ಸಂಚರಿಸುವ ಈ ರೈಲು ಉತ್ತರ ಕರ್ನಾಟಕದ ಮಾಲಾಧಾರಿಗಳಿಗೆ ಅನುಕೂಲ ಕಲ್ಪಿಸಿದಂತಾಗಿದೆ.